ಹೈದರಾಬಾದ್ ಗೆ ರೆಡ್ಡಿಗಳ ಸಭೆ ಶಿಫ್ಟ್

Janardhan Reddy
ಹೈದರಾಬಾದ್, ಅ. 29 : ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂದು ರೆಡ್ಡಿಗಳು ಸಭೆ ಇದೀಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಜನಾರ್ದನರೆಡ್ಡಿ ನೇತೃತ್ವದಲ್ಲಿ ಸಭೆ ಹೈದರಾಬಾದ್ ನ ಪ್ರಮುಖ ಹೋಟೆಲ್ ನಲ್ಲಿ ನಡೆಯುತ್ತಿದ್ದು, ಸುಮಾರು 15 ಶಾಸಕರು ಪಾಲ್ಗೊಂಡಿದ್ದಾರೆ. 15 ಮಂದಿ ಹೈದರಾಬಾದ್ ಕಡೆಗೆ ಪ್ರಯಾಣ ಆರಂಭಿಸಿದ್ದಾರೆ. ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವ ರಾಜ್ಯ ರಾಜಕೀಯ ಸಂಜೆ ಹೊತ್ತಿಗೆ ಈ ಎಲ್ಲ ಬೆಳವಣಿಗೆ ಒಂದು ಹಂತಕ್ಕೆ ಬಂದು ನಿಲ್ಲುವ ಸಾಧ್ಯತೆ ಇದೆ.

ಇನ್ನೊಂದಡೆ ಸ್ಪೀಕರ್ ಶೆಟ್ಟರ್ ಕೇಂದ್ರ ಬಿಂದುವಾಗಿದ್ದು, ಅವರ ತೆಗೆದುಕೊಳ್ಳುವ ನಿರ್ಧಾರ ಭಾರಿ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ. ಶೆಟ್ಟರ್ ಈಗಾಗಲೇ ಸಿದ್ಧಗಂಗಾ ಮತ್ತು ಸುತ್ತೊರು ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ತಮ್ಮ ನಿರ್ಧಾರದ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಆದರೆ, ಉತ್ತರ ಕರ್ನಾಟಕ ಅನೇಕ ಶಾಸಕರು ಜಗದೀಶ್ ಶೆಟ್ಟರ್ ನಾಯಕತ್ವ ವಹಿಸಿಕೊಳ್ಳಲಿ ಎಂದು ತೀವ್ರ ಒತ್ತಡ ಹೇರಿದ್ದಾರೆ. ಶಾಸಕ ಕಳಕಪ್ಪ ಬಂಡಿ, ಸಂಸದ ರಮೇಶ ಜಿಗಜಿಣಗಿ ಬಹಿರಂಗವಾಗಿ ನಾಯಕತ್ವ ಬದಲಾವಣೆ ಸೊಲ್ಲಿತ್ತಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆಯೂ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಚರ್ಚೆ ಆರಂಭಿಸಿದ್ದಾರೆ. ಆರ್ಎಸ್ಎಸ್ ಮುಖಂಡ ಜಿ ಸಂತೋಷ್ ಕೂಡಾ ಸದಾನಂದಗೌಡ ಜೊತೆಗಿರುವುದು ಈ ಮಾತುಕತೆಗೆ ಭಾರಿ ಮಹತ್ವದ ಬಂದಿದೆ. ಒಂದು ಮೂಲಕ ಪ್ರಕಾರ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಎಂದು ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+