ಹಸುಳೆಯ ತ್ವಚೆ ಮೇಲೆಲ್ಲಾ ಅಲ್ಲಾ ಶ್ಲೋಕ

Quran child, Ali Yakubov
ಮಾಸ್ಕೊ, ಅ. 27: ದಕ್ಷಿಣ ರಷ್ಯಾದ ಯುದ್ದಪೀಡಿತ ಚೆಚನ್ಯಾಗೆ ಸಮೀಪವಿರುವ ದಗೆಸ್ತಾನದಲ್ಲಿ ಜನಿಸಿರುವ ಆಲಿ ಯಾಕುಬೋವ್ ಎಂಬ 9 ತಿಂಗಳ ಹಸುಳೆ ಈಗ ಮುಸ್ಲಿಮರ ಮತ್ತು ಕುತೂಹಲಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಮಗು ಜನಿಸುತ್ತಲೇ ಗಲ್ಲದ ಮೇಲೆ 'ಅಲ್ಲಾ' ಅಕ್ಷರಗಳು ಕಂಡುಬಂದಿದ್ದು ನಂತರ ಅರೇಬಿಕ್ ಲಿಪಿಯಲ್ಲಿರುವ ಕುರಾನ್ ಉಕ್ತಿಗಳು ಮಗುವಿನ ಬೆನ್ನು, ಭುಜ, ಕಾಲು ಮತ್ತು ಹೊಟ್ಟೆಯ ಮೇಲೆ ಕಾಣಿಸತೊಡಗಿದವು ಎಂದು ವರದಿಯಾಗಿದೆ.

ವಿಚಿತ್ರ ಎಂಬಂತೆ ಈ ಸಾಲುಗಳು ವಾರಕ್ಕೆ ಎರಡು ಬಾರಿ ಬದಲಾಗುತ್ತಿದೆ. ಸೋಮವಾರ ಮತ್ತು ಗುರುವಾರ ರಾತ್ರಿ ಮೊದಲಿದ್ದ ಉಕ್ತಿಗಳ ಜಾಗದಲ್ಲಿ ಬೇರೆ ಉಕ್ತಿಗಳು ಕಾಣಿಸಿಕೊಳ್ಳುತ್ತದೆ. ಆಗ ಮಗುವಿನ ಉಷ್ಣತೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಮಗುವಿನ ಕುಟುಂಬದ ಮೂಲಗಳು ತಿಳಿಸಿದೆ. ಮಗುವಿನ ತಾಯಿ ಮತ್ತು ತಂದೆ ಅಷ್ಟೊಂದು ಧಾರ್ಮಿಕ ಮನೋಭಾವದವರಲ್ಲ, ಮಗುವಿನ ಮೇಲೆ ಗೋಚರಿಸುತ್ತಿರುವ ಕುರಾನ್ ಸಾಲುಗಳು ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಚಿಕಿತ್ಸೆ ವೇಳೆ ವೈದ್ಯರು ಈ ಬೆಳವಣಿಗೆಯನ್ನು ಗುರುತಿಸಿದಾಗ ವಿಷಯ ಬಹಿರಂಗಗೊಂಡಿದೆ. ಇದೊಂದು ಪವಾಡವೇ ಸರಿ ಎಂದಿರುವ ವೈದ್ಯರು ಮಗುವಿನ ಮೇಲೆ ಯಾರಾದರು ಬರೆಯುತ್ತಿರುವ ಶಂಕೆಯನ್ನು ತಳ್ಳಿ ಹಾಕಿದ್ದಾರೆ. ಈ ವಿದ್ಯಮಾನವನ್ನು ಲಂಡನ್ನಿನ ದೈನಿಕ ಸನ್ ವರದಿ ಮಾಡಿದೆ. ಆನಂತರ ವರ್ತಮಾನವನ್ನು ಭಾರತದೊಳಗೆ ಬಿಟ್ಟುಕೊಂಡ ಮೊದಲ ಮಾಧ್ಯಮ ಕಾಶ್ಮೀರ್ ಅಬ್ ಸರ್ ವರ್ ಆನ್ ಲೈನ್.

ಇಂಥ ಪವಾಡ ಸದೃಶ ಸುದ್ದಿ ದೂರದ ರಷ್ಯದಲ್ಲಿ ಸಂಭವಿಸಿರುವುದರಿಂದ ಟಿವಿ9 ವಾರ್ತಾ ವಾಹಿನಿಯ ಹೀಗೂ ಉಂಟೆ ಕಾರ್ಯಕ್ರಮ ಒಂದು ಎಪಿಸೋಡ್ ನಿಂದ ವಂಚಿತವಾಗಿದೆ. ಆದರೂ, ನಮ್ಮ ಟಿವಿ9 ನಾರಾಯಣ ಸ್ವಾಮಿ ಅವರು ರಷ್ಯಕ್ಕೆ ಹೋಗಿ ಒಂದು ಕೈ ನೋಡಬಹುದು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+