ಬಳ್ಳಾರಿ ರೆಡ್ಡಿಗಳಿಗೆ ಕೇರ್ ಮಾಡದ ಸಿಎಂ

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರ ಬದುಕನ್ನು ಪುನರ್ ರೂಪಿಸುವುದೇ ನನ್ನ ಆಧ್ಯತೆ ಎಂದರು. ನಾನು ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಇದಕ್ಕೆ ದೇವರು ಮತ್ತು ಜನತೆಯ ಬೆಂಬಲವಿದೆ. ನನ್ನ ಅಧಿಕಾರ ಚೌಕಟ್ಟಿನಲ್ಲಿ ನಾನು ಅಧಿಕಾರ ಚಲಾಯಿಸಿರುವೆ. ಇದರಿಂದಾಗಿ ಯಾವ ಸಮಸ್ಯೆಯಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಸಚಿವ ಸಂಪುಟ ಒಗ್ಗಟ್ಟಾಗಿದೆ. ಮಾಧ್ಯಮಗಳಲ್ಲಿ ಬರುವುದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಸತ್ಯಾಂಶ ಕಡಿಮೆ. ಬಳ್ಳಾರಿ ಸಚಿವರ ಜೊತೆ ನಿಕಟ ಸಂಪರ್ಕ ಇದೆ. ಅವರು ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ವಿವರಿಸಿದರು. ಗದಗ ಡಿಸಿ ವರ್ಗಾವಣೆ, ಗಣಿ ಲಾರಿಗಳ ಮೇಲೆ ಹೆಚ್ಚುವರಿ ಸುಂತ ವಿಧಿಸಿರುವುದು. ಸಚಿವರ ಖಾತೆಗಳ ಮೇಲೆ ಅನಗತ್ಯ ಸವಾರಿಯಿಂದ ರೆಡ್ಡಿ ಮತ್ತು ಸಿಎಂ ನಡುವೆ ಭಿನ್ನಮತ ಉಂಟಾಗಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications