ಭಾರತ,ಚೀನಾ ಉತ್ತಮ ಬಾಂಧವ್ಯ ವೃದ್ಧಿಗೆ ಒತ್ತು

ಏಳನೇ ಆಗ್ನೇಯ ಏಷ್ಯಾ ದೇಶಗಳ ಶೃಂಗಸಭೆ (ಏಷ್ಯಾನ್)ಮತ್ತು ನಾಲ್ಕನೆಯ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಥಾಯ್ಲೆಂಡಿಗೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಚೀನಾ ಪ್ರಧಾನಿ ವೆನ್ ಜಿಯಾಬಾವೊ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಮನಮೋಹನ್ ಸಿಂಗ್ ಭೇಟಿ ನೀಡಿದ ಬಗ್ಗೆ ಚೀನಾ ಅಸಮಧಾನ ವ್ಯಕ್ತಪಡಿಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವ ಕೆಲವು ಯೋಜನೆಗಳಲ್ಲಿ ಚೀನಾ ಕೈವಾಡ ಇರುವುದಾಗಿ ಭಾರತ ಆರೋಪಿಸಿತ್ತು .ಭಾರತ ಚೀನಾ ಗಡಿ ವಿವಾದ ಸಹ ಭುಗೆಲೆದ್ದಿದೆ.
ಈ ಎಲ್ಲಾ ಪರಿಣಾಮಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ಭೇಟಿಯ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು. ಪ್ರವಾಸದ ಭಾಗವಾಗಿ ಇಂಡೋನೇಷಿಯಾ, ಕಾಂಬೋಡಿಯಾ, ವಿಯಟ್ನಾಂ, ಸಿಂಗಪೂರ್ ದೇಶಗಳ ಪ್ರಧಾನಿಗಳೊಂದಿಗೆ ಸಹ ಮನಮೋಹನ್ ಸಿಂಗ್ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.
(ಏಜನ್ಸೀಸ್)












Click it and Unblock the Notifications