ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುದ್ಧಗಾಳಿಗೆ ಬೆನ್ನು ಹತ್ತಿದ ವಿಶ್ವಮಾನವ

|
Google Oneindia Kannada News

Bangaloreans to cycle for climate action
ಬೆಂಗಳೂರು, ಅ. 23 : ಹದಗೆಡುತ್ತಿರುವ ಹವಾಮಾನ, ಗಾಳಿ, ನೀರು, ಆಹಾರ, ಕಾರ್ಬನ್ ಡೈಯಾಕ್ಸೈಡ್, ಲೆಡ್, ಹಾಳೂಮೂಳೂ.. ಉಸಿರುಕಟ್ಟಿಸಿ ನಿಧಾನವಾಗಿ ಸಾಯಿಸುವ ಕಲುಷಿತ ವಾತಾವರಣ ಮಾಲಿನ್ಯಕ್ಕೆ ಮಂಗಳ ಹಾಡುವ ಪ್ರಯತ್ನದ ಕ್ಲೈಮೇಟ್ ಛೇಂಜ್ ದಿನಾಚರಣೆಗೆ ನಮ್ಮ ಬೆಂಗಳೂರು ಸಜ್ಜಾಗಿದೆ. ಅಕ್ಟೋಬರ್ 24ರ ಶನಿವಾರದಂದು ಜಾಗತಿಕ ಕ್ಲೈಮೇಟ್ ದಿನಾಚರಣೆ ಆಚರಿಸಲಾಗುತ್ತಿದ್ದು ಇದಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಬೈಸಿಕಲ್ ಯಾತ್ರೆ ನಡೆಯಲಿದೆ.

ಶನಿವಾರ ಬೆಳಗ್ಗೆ ಕಬ್ಬನ್ ಪಾರ್ಕಿನಿಂದ ಸೈಕಲ್ ರ‌್ಯಾಲಿ ಶುರುವಾಗುತ್ತದೆ. ಎಂಟು ಕಿಲೋಮೀಟರ್ ಉದ್ದದ ಈ ಯಾತ್ರೆ ನಗರದ ಪ್ರಮುಖ ಸ್ಥಳಗಳಾದ ಟ್ರಿನಿಟಿ ವೃತ್ತ, ಹಲಸೂರು ಕೆರೆ, ಕಮರ್ಷಿಯಲ್ ರಸ್ತೆ, ಇಂಡಿಯನ್ ಎಕ್ಸಪ್ರೆಸ್ ಕಟ್ಟಡ ಮತ್ತು ವಿಧಾನಸಭೆ ಹಾದಿಗುಂಟ ಸಾಗಿ ಮರಳಿ ಕಬ್ಬನ್ ಉದ್ಯಾನವನದಲ್ಲಿ ಕೊನೆಗೊಳ್ಳುತ್ತದೆ. ವಾತಾವರಣ ಬದಲಾವಣೆಗೆ ಕೈಜೋಡಿಸಿರುವ ನೀವೂ ಕೂಡ ನಾಳೆ ಸೈಕಲ್ ತುಳಿಯಬಹುದು.

ವಾತಾವರಣ ಬದಲಾವಣೆಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಉಂಟುಮಾಡುವುದೇ ಸೈಕಲ್ ಯಾತ್ರೆಯ ಉದ್ದೇಶ. 152 ದೇಶಗಳಲ್ಲಿ ಅಕ್ಟೋಬರ್ 24ರಂದು ಕ್ಲೈಮೆಟ್ ಆಕ್ಷನ್ ಕಾರ್ಯಕ್ರಮಗಳು ಏರ್ಪಾಟಾಗಿವೆ. ವಿಶ್ವ ಮಟ್ಟದಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ವಾತಾವರಣ ಪುನಃಶ್ಚೇತನಗೊಳಿಸುವ ಈ ಯಜ್ಞಕ್ಕೆ 350.org ಎಂದು ಹೆಸರು.

ವಾಹನಗಳಿಂದ ಹೊರಸೂಸುವ ಸಾರಜನಕ ಪ್ರಮಾಣ ಅಪಾಯಕಾರಿ ಮಟ್ಟ ತಲುಪುತ್ತಿದ್ದು ಅದನ್ನು ಮಟ್ಟಹಾಕುವುದಕ್ಕೆ ವಿಶ್ವ ಪ್ರಜೆಗಳು ಶತಪ್ರಯತ್ನ ಮಾಡಬೇಕಾಗಿದೆ. ಕಲುಷಿತ ಹೊಗೆ ಬಿಡದ ಸೈಕಲ್ ಸವಾರಿ ಸಾರಜನಕ ವಿರೋಧಿ ಚಳವಳಿಗೆ ದ್ಯೋತಕವಾಗಿ ನಿಂತಿದೆ. ನಾಳಿನ ಬೈಸಿಕಲ್ ಯಾತ್ರೆಗೆ 350.org ಸಂಘಟಕರು ಸುಮಾರು 1,000 ಸೈಕಲ್ ಸರದಾರರನ್ನು ನಿರೀಕ್ಷಿಸಿದ್ದಾರೆ. ನೀವೂ ಪಾಲ್ಗೊಂಡರೆ ಸಂಖ್ಯೆ 1,001ಕ್ಕೆ ಏರುತ್ತದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X