ಕೈ ಕರಾಮತ್ತಿನಲ್ಲಿ ಮೂರು ರಾಜ್ಯಗಳು
ನವದೆಹಲಿ,
ಅ. 22 : ಕಳೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ಮಹಾರಾಷ್ಟ್ರ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಯ ಚುನಾವಣೆಯ ಮೇಲೂ ತನ್ನ ಪ್ರಭಾವ ಬೀರಿದೆ. ಇಂದು ಬೆಳಗ್ಗೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದ್ದು, ಇತ್ತೀಚಿನ ವರದಿಗಳು ಬಂದಾಗ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮತ್ತೆ ಮುಖಭಂಗಕ್ಕೀಡಾಗುವ ಎಲ್ಲ ಲಕ್ಷಣಗಳಿದ್ದು, ರಾಜ್ ಠಾಕ್ರೆ ನೇತ್ರತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಬಿಜೆಪಿ ಮೈತ್ರಿಗೆ ಬಲವಾದ ಏಟು ನೀಡಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. id="toptextpromo">ಮಹಾರಾಷ್ಟ್ರದ
288 ವಿಧಾನಸಭೆ ಕ್ಷೇತ್ರಗಳಲ್ಲಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎನ್ ಸಿಪಿ ಮುಂದಿದ್ದರೆ, 98 ಕ್ಷೇತ್ರಗಳಲ್ಲಿ ಬಿಜೆಪಿ ಶಿವಸೇನೆ ಮುಂದಿದೆ. ಬಿಜೆಪಿ ಶಿವಸೇನೆಗೆ ಭಾರಿ ಪೆಟ್ಟು ನೀಡಿರುವ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ 15 ಕ್ಷೇತ್ರಗಳಲ್ಲಿ ಮುನ್ನೆಡ ಗಳಿಸಿಕೊಂಡಿದೆ. ಹರಿಯಾಣದಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಗಳಿಸಿದ್ದು, ಒಂಪ್ರಕಾಶ್ ಚೌತಾಲಾ ಅವರ ಐಎನ್ ಎಲ್ ಡಿ 14 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನೆಡೆ ಗಳಿಸಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications