ಜನಾದೇಶಕ್ಕೆ ತಲೆಬಾಗುವೆವು : ಬಿಜೆಪಿ

BJP concedes defeat in Maharashtra
ಮುಂಬೈ, ಅ. 22 : ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಅಂಚು ತಲುಪುತ್ತಿದ್ದಂತೆಯೇ ಕೈ ಬಳಗದಲ್ಲಿ ವಿಜಯೋತ್ಸವ ಮನೆ ಮಾಡಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚಿಂತನೆ ಶುರುವಾಗಿದ್ದು, ಈ ಬಾರಿ ಎನ್ ಸಿಪಿಯ ಛಗನ್ ಭುಜಬಲ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ಕೂಗು ಎನ್ ಸಿಪಿ ವಲಯದಿಂದ ಕೇಳಬರತೊಡಗಿದೆ.

ಇನ್ನೊಂದಡೆ ಬಿಜೆಪಿ-ಶಿವಸೇನೆ ಪಾಳೆಯದಲ್ಲಿ ನಿರಾಶ ಕಾರ್ಮೋಡ ಕವಿದಿದ್ದು, ನಾಯಕರ ಮುಖ ಕಪ್ಪಿಟ್ಟಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ, ಜನಾದೇಶಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ. ಜನತೆಯ ತೀರ್ಮಾನವೇ ಅಂತಿಮ. ಪ್ರತಿಪಕ್ಷದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.

ಶಿವಸೇನೆ ಮುಖಂಡ ಮನೋಹರ ಜೋಶಿ ಕೂಡಾ ಫಲಿತಾಂಶಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಈ ಚುನಾವಣೆಯಲ್ಲಿ ನಮಗೆ ಗೆಲುವು ದೊರೆಯಲಿದೆ ಎಂಬ ನಂಬಿಕೆ ಇತ್ತು. ಆದರೆ, ಮತದಾರರ ನಿರ್ಧಾರವೇ ಬೇರೆ ಆಗಿತ್ತು. ಆಗಿರುವ ತಪ್ಪನ್ನು ತಿದ್ದುಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+