ತಿಮ್ಮಪ್ಪನ ಭಕ್ತರಿಗೊಂದು ಸಿಹಿ ಲಡ್ಡು

ಬುಧವಾರ ನಸುಕಿನಿಂದಲೇ ವೈಕುಂಠ ಸರತಿ ಸಾಲಿನ ಸಂಕೀರ್ಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಟಿಟಿಡಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ ರವಿ ತಿಳಿಸಿದ್ದಾರೆ. ಉಚಿತ ದರ್ಶನ ಮತ್ತು 50 ರುಪಾಯಿಗಳ ದರ್ಶನದ ಜೊತೆಗೆ ಈಗ 300 ರುಪಾಯಿಗಳ ಶೀಘ್ರ ದರ್ಶನ ವ್ಯವಸ್ಥೆ ಏರ್ಪಡಿಸಲಾಗಿದ್ದು, ಭಕ್ತರಿಗೆ ನಿರಂತರವಾಗಿ ಶೀಘ್ರ ದರ್ಶನದ ಟಿಕೆಟ್ ದೊರಕುತ್ತದೆ ಎಂದು ಅವರು ಹೇಳಿದರು.
ಹೊಸ ಟಿಕೆಟ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ದಶಕಗಳಿಂದ ಜಾರಿಯಲ್ಲಿದ್ದ 200 ರುಪಾಯಿಗಳ ಅರ್ಚನ ಅನಂತರ ದರ್ಶನ ಯೋಜನೆ ರದ್ದಾಗುತ್ತದೆ. ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಪ್ರಭಾವಿ ವ್ಯಕ್ತಿಗಳ ಮೂಲಕ ಶೀಘ್ರ ದೇವರ ದರ್ಶನ ಮಾಡುವ ಭಕ್ತರ ಸಂಖ್ಯೆ ಕಡಿಮೆ ಆಗಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ನಿರೀಕ್ಷಿಸಿದೆ ಎಂದು ಟಿ ರವಿ ಹೇಳಿದರು.
(ಏಜನ್ಸೀಸ್)












Click it and Unblock the Notifications