ಲಾರಿ ಮಾಲೀಕರೆ ಸಹಕರಿಸಿ : ಯಡಿಯೂರಪ್ಪ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ತೀರ್ಮಾನಕ್ಕೂ ಪ್ರವಾಹದ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಕ್ರಮಗಳಿಗೂ ಸಂಬಂಧವಿಲ್ಲ. ಇದರ ಹೊರತಾಗಿಯೂ ನಿರ್ಧಾರದಲ್ಲಿ ಹುಳುಕು ಹುಡುಕಲು ಹೊರಡುವುದು ಸರಿಯಲ್ಲ ಎಂದರು. ಈ ಅಂಶ ಅರಿತು ಸರಕಾರ ಕೈಗೊಂಡಿರುವ ಸುಂಕ ವಿಧಿಸುವ ಕ್ರಮಕ್ಕೆ ಲಾರಿ ಮಾಲೀಕರು ಸಹಕರಿಸಬೇಕು ಎಂದು ಯಡಿಯೂರಪ್ಪ ಕೋರಿದ್ದಾರೆ.
ಕಬ್ಬಿಣ ಅದಿರು, ಗ್ರಾನೈಟ್ ಮರಳು ಹಾಗೂ ಮರ ಸಾಗಣೆ ನಿತ್ಯ ನಡೆಯುತ್ತಿರುವ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದಿದೆ. ಒತ್ತಡ ವಿಪರೀತವಾಗಿರುವುದರಿಂದ ಈ ರಸ್ತೆಗಳು ಬೇಗನೆ ದುರಸ್ತಿಗೆ ಬರುತ್ತಿವೆ. ಹೀಗಾಗಿ ರಸ್ತೆಗಳು ಸ್ಥಿತಿಯನ್ನು ತುರ್ತಾಗಿ ಸುಧಾರಿಸಬೇಕಿದ್ದು, ಇದರಿಂದ ವಾಹನಗಳ ಮಾಲೀಕರು, ಚಾಲಕರಿಗೆ ಸಹಾಯವಾಗುತ್ತದೆ. ಜೊತೆಗೆ ವಾಹನಗಳ ದುರಸ್ತಿ ಕಡಿಮೆಯಾಗಿ ಚಾಲಕರು ಮತ್ತು ಇತರ ಜೀವ ರಕ್ಷಣೆ ಸುಲಭವಾಗುತ್ತದೆ. ಸಂಚಾರವೂ ಸುಗಮವಾಗುತ್ತದೆ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications