ಮೈಸೂರಲ್ಲಿ ಉದ್ಯಮಿಯ ಅಪಹರಣ
ಮೈಸೂರು, ಅ. 14 : ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಉದ್ಯಮಿ ಮತ್ತು ಅವರ ಮಗನನ್ನು ದುಷ್ಕರ್ಮಿಗಳ ಗುಂಪು ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಕುಶಾಲನಗಲದ ಗುಮ್ಮನಕೊಲ್ಲಿ ನಿವಾಸಿ ಮೋಹನ್ (47) ಮತ್ತು ಅವರ ಮಗ ಪಿ ಎಂ ತುಷಾರ್ ಅಪಹರಣಕ್ಕೊಳಗಾದವರು.
ಮೋಹನ್ ತಮ್ಮ ಮಗನನ್ನು ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಯಾದವನಗಿರಿಯ ಚೈತನ್ಯ ಟ್ರಸ್ಟ್ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ ವಾಹನದ ಬಳಿ ಬಂದಾಗ ತವೇರಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿದ್ದಾರೆ. ಮೋಹನ್ ತಂದಿದ್ದ ಕಾರು ಆಸ್ಪತ್ರೆ ಮುಂದೆ ನಿಂತಿದೆ. ಅಪಹರಣಕಾರರು ಮೋಹನ್ ಅವರ ಮೊಬೈಲ್ ಮೂಲಕ ಮನೆಯಲ್ಲಿದ್ದ ಅವರ ಪತ್ನಿ ಕವಿತಾ ಅವರಿಗೆ ಮಾಹಿತಿ ನೀಡಿ ತಕ್ಷಣ ಮೈಸೂರಿಗೆ ಬರುವಂತೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಹರಣ ಪ್ರಕರಣ ತಿಳಿಯುತ್ತಿದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ಕಾರು ಮತ್ತು ದುಷ್ಕರ್ಮಿಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿದ್ದಾರೆ. ಅಪಹರಣಕ್ಕೊಳಗಾದ ಮೋಹನ್ ಗುತ್ತಿಗೆದಾರನಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications