ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರಿ ಗುಹೆ ದುರಸ್ತಿ ಸ್ಥಗಿತ; ಕಾವಲು ನೇಮಕಕ್ಕೆ ಆಗ್ರಹ

|
Google Oneindia Kannada News

Datta peeta, bb hills
ಚಿಕ್ಕಮಗಳೂರು, ಅ.13: ಇಲ್ಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾ ಗುಹೆಯ ಮೇಲ್ಛಾವಣಿ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಧಾರ್ಮಿಕ ದತ್ತ್ತಿ ಇಲಾಖೆಗೆ ವರದಿ ಸಲ್ಲಿಸಲು ಮುಂದಾಗಿದೆ. ದುರಸ್ತಿ ಕಾರ್ಯ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗುಹೆಯ ರಕ್ಷಣೆಗಿರುವ ಕಾವಲುಗಾರರಿಗಿಂತ ಹೆಚ್ಚುವರಿ ಪಡೆ ಅವಶ್ಯ ಎಂದು ಸ್ಥಳೀಯ ಜೆಡಿಎಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಅಪೆಕ್ಸ್ ನ್ಯಾಯಾಲಯದ ಪಿಡಿ ದಿನಕರನ್ ನೇತೃತ್ವದ ಪೀಠ ನೀಡಿದ ಆದೇಶದ ಮೇರೆಗೆ ಕಳೆದ ವಾರ ದುರಸ್ತಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು..ಕಳೆದ ವರ್ಷದ ಭಾರಿ ಮಳೆಗೆ ಸಿಕ್ಕು ಗುಹೆ ಮೇಲ್ಛಾವಣಿ ಕುಸಿದಿತ್ತು. ಒಂದು ವರ್ಷದ ಬಳಿಕ ಬೆಂಗಳೂರು ಮೂಲದ ಸಂಸ್ಥೆಯೊಂದು ದುರಸ್ತಿ ಕಾರ್ಯದ ಗುತ್ತಿಗೆ ಪಡೆದಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಸಂಸದ ಸದಾನಂದಗೌಡ, ಶಾಸಕ ಸಿಟಿ ರವಿ ಸೇರಿದಂತೆ ಜಿಲ್ಲಾಡಳಿತ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಸುಮಾರು 2.09ಕೋಟಿ ರು.ಗಳ ವೆಚ್ಚದ ದುರಸ್ತಿ ಕಾರ್ಯ ಕುಂಟುತ್ತಾ ಸಾಗಿತ್ತು. ಗುಹೆ ಒಳಗಡೆ ಇದ್ದ ಮಣ್ಣು, ನೀರನ್ನು ಹೊರ ಹಾಕಿ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರರು ಮುಂದಾಗಿದ್ದರು. ಗುಹೆ ನವೀಕರಣ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕಟ್ಟಡ ಕೆಡವಲಾಗುತ್ತಿದೆ ಎಂದು ಜೆಡಿಎಸ್ ನ ನಗರಸಭೆ ಸದಸ್ಯ ಚಂದ್ರಪ್ಪ ಹಾಗೂ ರಾಜ್ಯ ಉಪಾಧ್ಯಕ್ಷ ಮುಕ್ತಿಯಾರ್ ಅಹಮದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಸಂಬಂಧ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X