ಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?

ಅವರ ಮುಂದೆ 28 ಪ್ರಕರಣಗಳ ವಿಚಾರಣೆ ನಡೆಯಬೇಕಿತ್ತು. ಪ್ರಕರಣಗಳ ಪಟ್ಟಿಯೂ ತಯಾರಾಗಿತ್ತು. ಆದರೆ, ಇದ್ದಕ್ಕಿಂತೆ ಅವರು ಕೋರ್ಟ್ ಕಲಾಪವನ್ನು ರದ್ದುಗೊಳಿಸಿದರು. ಆದರೆ, ಇಷ್ಟೊಂದು ಉಹಾಪೋಹಗಳ ನಡುವೆ ಬುಧವಾರಕ್ಕೆ (ಅ.14) ಅವರ ಮುಂದೆ 23 ಪ್ರಕರಣಗಳನ್ನು ವಿಚಾರಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದಡೆ ಲಂಡನ್ ಗೆ ತೆರಳಿರುವ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ಇಂದು ನವದೆಹಲಿಗೆ ಹಿಂತಿರುಗಲಿದ್ದಾರೆ. ದಿನಕರನ್ ಅವರ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನಲ್ಲಿ ಸಭೆ ನಡೆಯಲಿದೆ. ದಿನಕರನ್ ಸೇರಿದಂತೆ ಸುಪ್ರಿಂಕೋರ್ಟ್ ಗೆ ನೇಮಕವಾಗಿರುವ ಇತರ ನಾಲ್ವರು ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳ ತೀರ್ಮಾನ ನಡೆಯುವ ಸಾಧ್ಯತೆ ಇದೆ.
(ಏಜನ್ಸೀಸ್)











Click it and Unblock the Notifications