• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ತಬರನ ಕಥೆಗೆ ತೆರೆ

|

ಬೆಂಗಳೂರು, ಅ .14 :ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಇ-ಪ್ರೊಕ್ಯೂರ್‌ಮೆಂಟ್ ಹಾಗೂ ಎಚ್‌ಆರ್‌ಎಂಎಸ್ ಯೋಜನೆಗಳಿಗೆ ಪ್ರತಿಷ್ಠಿತ ಸಿಎಸ್‌ಐ-ನಿಹಿಲೆಂಟ್ ಇ-ಆಡಳಿತ ಪ್ರಶಸ್ತಿ ಸಂದಾಯವಾಗಿದೆ. 2008-09 ನೇ ಸಾಲಿನ ಈ ಪ್ರಶಸ್ತಿಯನ್ನು ಅಕ್ಟೋಬರ್ 9 ರಂದು ಪೂನಾದಲ್ಲಿ ನಡೆದ ಒಂದು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ತಬರನ ಕಥೆಯನ್ನು ಇನ್ನಿಲ್ಲವಾಗಿಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ ಎನ್ನುತ್ತದೆ ಕರ್ನಾಟಕ ಸರಕಾರ. ಇಷ್ಟಕ್ಕೂ ರಾಜ್ಯಕ್ಕೆ ಈ ಅವಾರ್ಡ್ ಯಾಕೆ ಬಂತು?ಎಚ್‌ಆರ್‌ಎಂಎಸ್ ಎಂದರೇನು ? ಇ-ಪ್ರೊಕ್ಯೂರ್ಮೆಂಟ್ ಯಾತಕ್ಕಾಗಿ ?

ಎಚ್‌ಆರ್‌ಎಂಎಸ್: ಈ ಯೋಜನೆಯಡಿಯಲ್ಲಿ ರಾಜ್ಯದ 5 ಲಕ್ಷ ಸರ್ಕಾರಿ ನೌಕರರು/ ಅಧಿಕಾರಿಗಳು ತಮ್ಮ ವೇತನವನ್ನು ಎಚ್‌ಆರ್‌ಎಂಎಸ್ ತಂತ್ರಾಂಶವನ್ನು ಬಳಸಿ ಪಡೆಯುತ್ತಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರ ಯಶಸ್ವಿಯಾಗಿ ಅನುಷ್ಠಾಗೊಳ್ಳುತ್ತಿರುವ ಯೋಜನೆಯಾಗಿದೆ. ಇದರ ಮುಂದುವರೆದ ಭಾಗವಾಗಿ ದಿನಾಂಕ 31-03-2010ರಿಂದ ನಿವೃತ್ತರಾಗುವ ಸರ್ಕಾರಿ ನೌಕರರಿಗೆ ನಿವೃತ್ತಿಯಾಗುವ ದಿನದಂದೇ ಅವರಿಗೆ ಸಿಗಲಿರುವ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುವುದು. ಇದಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರುಗಳ ಸೇವಾ ಪುಸ್ತಕದಲ್ಲಿನ ವಿವರಗಳನ್ನು ( Service Register)ಅಂತರ್ಜಾಲದ ಮುಖಾಂತರ ರಾಜ್ಯದ ಡೆಟಾ ಸೆಂಟರ್‌ನಲ್ಲಿ ಸಂಗ್ರಹಿಸಲಾಗುತ್ತಿದೆ.

ಪಾರದರ್ಶಕತೆಗಾಗಿ ಇ-ಪ್ರೊಕ್ಯೂರ್ಮೆಂಟ್ ಯೋಜನೆ : ಈ ಯೋಜನೆಯಡಿಯಲ್ಲಿ ರಾಜ್ಯದ ಸಂಗ್ರಹಣಾ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ವಿದ್ಯುನ್ಮಾನ ಮಾಧ್ಯಮವನ್ನು ಬಳಸಿಕೊಂಡು ಯಾವುದೇ ಬಿಡ್ಡುದಾರರು ಯೋಜನೆಯ ಟೆಂಡರ್ ಕಾರ್ಯದಲ್ಲಿ ಭಾಗವಹಿಸಬಹುದು. ಲೋಕೋಪಯೋಗಿ ಇಲಾಖೆ, ಬಿ.ಡಿ.ಎ. ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ರಸ್ತೆ ಅಬಿವೃದ್ಧಿ ನಿಗಮ ಸೇರಿದಂತೆ 38 ಕ್ಕೂ ಅಧಿಕ ಇಲಾಖೆಗಳು ಈ ವೇದಿಕೆಯನ್ನು ಬಳಸಿಕೊಂಡು 9500 ಕೋಟಿ ರೂಪಾಯಿಗಳ ಸಂಗ್ರಹಣಾ ಪ್ರಕ್ರಿಯೆಯನ್ನು ಈ ಒಂದು ವರ್ಷದಲ್ಲಿ ನಡೆಸಿದೆ.

ಇ-ಆಡಳಿತ ಇಲಾಖೆಯು ಈ ಯೋಜನೆಗಳ ಪಾಲುದಾರರಾದ ಎಲ್ಲಾ ಬಡವಾಡೆ ಅಧಿಕಾರಿಗಳನ್ನು/ಗುತ್ತಿಗೆದಾರರನ್ನು/ಅನುಷ್ಠಾನ ಅಧಿಕಾರಿಗಳನ್ನು ಮತ್ತು ಯೋಜನೆಗಳ ಖಾಸಗಿ ಪಾಲುದಾರರಾದ ಹ್ಯೂಲೆಟ್ ಪ್ಯಾಕರ್ಡ್ ಮತ್ತು ಸಿಎಂಸಿ ಕಂಪನಿಯನ್ನು ಹಾರ್ದಿಕವಾಗಿ ಈ ಸಂದರ್ಭದಲ್ಲಿ ಅಭಿನಂದಿಸಿದೆ.

ಸರಕಾರಿ ಸುದ್ದಿ ಮೂಲ, ಇಂಗ್ಲಿಷಿನಲ್ಲಿ :

Prestigious CSI-Nihilent e-Governance Awards to Karnataka

Bangalore, October 14: (Karnataka Information): Karnataka e-Governance Department has bagged the prestigious CSI-Nihilent e-Governance Award for the year 2008-09 for its e- Procurement HRMS programmes.

At a special function held on 9-10-2009 at Pune, the prestigious CSI-Nihilent e-Goverance Awards 2008-09 was given to (1) e-Procurement and (2) HRMS programmes implemented by the e-Governance department of the State Government.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more