ನೋಟು ಎಣಿಸಿಯೆಣಿಸಿ ಯಡ್ಡಿ ಸುಸ್ತು

ದೇಶವೇ ತಲೆ ಮೇಲೆ ಬಿದ್ದಂತೆ ಸಿಎಂ ವರ್ತಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಸಭೆಗಳನ್ನು ನಡೆಸುವ ಬದಲು ಹಳ್ಳಿಗಳಿಗೆ ಹೋಗಬಾರದೇ ? ಆದರೂ ದೇಣಿಗೆ ಸಂಗ್ರಹಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರವಾಹದಿಂದ ಬೆಳೆ ಕಳೆದುಕೊಡವರಿಗೆ ಪರಿಹಾರ ವಿತರಿಸಲು ಮಾರ್ಗ ಸೂಚಿ ನೋಡುವ ಸರಕಾರ ಮಠಗಳಿಗೆ ಹಣ ಕೊಡುವಾಗ ಯಾವ ನಿಯಮ ಅನುಸರಿಸಿತ್ತು?ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಗದಗ ಜಿಲ್ಲೆಯ ಗಂಜಿ ಕೇಂದ್ರವೊಂದಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಗಂಜಿ ಕುಡಿದು ಫೋಟೋ ತೆಗೆಸಿಕೊಂಡರು. ಅವರು ಅಲ್ಲಿಂದ ನಿರ್ಗಮಿಸಿದ ಎರಡು ಗಂಟೆಯಲ್ಲಿ ಆ ಗಂಜಿ ಕೇಂದ್ರವೇ ಬಂದ್ ಆಗಿದೆ. ಪರಿಹಾರ ವಿತರಣೆಯಲ್ಲಿ ಸರಕಾರ ಪಕ್ಷ ಮತ್ತು ಜಾತಿ ರಾಜಕೀಯ ಮಾಡುತ್ತಿದೆ ಎಂದು ರೇವಣ್ಣ ದೂರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications