ಉಗ್ರ ಹಫೀಜ್ ವಿರುದ್ಧದ ಪ್ರಕರಣಗಳ ವಜಾ!

Hafeez Saeed
ಲಾಹೋರ್, ಅ. 12 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಜಮಾತೆ ಉದ್ ದವಾ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿದೆ. ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಈತನಿಗೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಭಯಾನಕ ಭಯೋತ್ಪಾದನೆ ಕೃತ್ಯದ ನೇರ ಕಾರಣಿಕರ್ತ ಈ ಸಯೀದ್. ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನೀಡಿರುವ ಹೇಳಿಕೆಯಿಂದ ಇದು ಸಾಬೀತಾಗಿತ್ತು. ನಿಷೇಧಿತ ಸಂಘಟನೆ ಲಷ್ಕರ್ ಇ ತೊಯ್ಬಾದ ಮುಖ್ಯಸ್ಥನಾಗಿರುವ ಸಯೀದ್ ಮುಂಬೈ ಮೇಲೆ ದಾಳಿ ನಡೆಸಲು ಸಂಪೂರ್ಣ ಸಹಾಯ, ಸಹಕಾರ ನೀಡಿದ್ದಾನೆ. ಈ ಬಗ್ಗೆ ಭಾರತಕ್ಕೆ ದೊರೆತಿರುವ ಅಷ್ಟೂ ಮಾಹಿತಿಯನ್ನು ಎರಡೆರಡು ಭಾರಿ ಸಾಕ್ಷ್ಯಾಧಾರಗಳನ್ನು ಇಸ್ಲಾಮಾಬಾದ್ ಗೆ ಕಳುಹಿಸಿಕೊಡಲಾಯಿತು. ಆದರೆ, ಪಾಕ್ ಸರಕಾರ ಉಗ್ರ ಪರ ವಕಾಲತ್ತು ನಡೆಸಿದ್ದರಿಂದ ಇಂದು ಜಗತ್ತು ಕಂಡ ಪ್ರಬಲ ಉಗ್ರನೊಬ್ಬನನ್ನು ಪಾಕ್ ನ್ಯಾಯಾಲಯ ಬಿಡುಗಡೆಗೊಳಿಸಿದಂತಾಗಿದೆ.

ಅದಕ್ಕೂ ಮೊದಲು ಸಯೀದ್ ಬಂಧನಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ವಿಶ್ವಸಂಸ್ಥೆ ಭದ್ರತಾ ಇಲಾಖೆ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ತಂದಿತ್ತು. ಆಗ ಪಾಕ್ ಸರಕಾರ ಸಯೀದ್ ನನ್ನು ಬಂಧಿಸಿ ಗೃಹ ಬಂಧನದಲ್ಲಿಟ್ಟಿತ್ತು. ಉಗ್ರ ಸಯೀದ್ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಭಾರತ ಕನಿಷ್ಠ ನೂರು ಬಾರಿ ಒತ್ತಾಯಿಸಿದರೂ ಪಾಕ್ ಮಾತ್ರ ಉಗ್ರನ ಪರ ವಕಾಲತ್ತು ನಡೆಸಿದ್ದರಿಂದ ಇಂದು ಸಯೀದ್ ಬಿಡುಗಡೆಯಾಗಿದ್ದಾನೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+