ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ

|
Google Oneindia Kannada News

Maoists attack in Jharkhand
ರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ ಕರೆ ನೀಡಿರುವ ನಕ್ಸಲರು ರೈಲ್ವೆ ಹಳಿ ಸ್ಫೋಟಗೊಳಿಸಿದ್ದಾರೆ. ಮೂರು ಲಾರಿಗಳಿಗೆ ಬೆಂಕಿ ಹಚ್ಚಿ ರಣ ಕೇಕೆ ಹಾಕಿದ್ದಾರೆ.

ಇನ್ಪ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹಾಗೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಕ್ಸಲರು ನಮ್ಮವರು. ಆವರ ಮೇಲೆ ಸೇನಾ ಕಾರ್ಯಚರಣೆ ನಡೆಸುವುದಿಲ್ಲ. ಸಂಧಾನಕ್ಕೆ ಬಂದರೆ ಸರಕಾರ ವೇದಿಕೆ ರೂಪಿಸುತ್ತಿದೆ. ಆದರೆ, ಇದೇ ಕೆಲಸ ಮುಂದುವರಿಸಿದರೆ ಕೇಂದ್ರ ತಕ್ಕ ತಿರುಗೇಟು ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದರು. ನಕ್ಸಲರ ಗಾಢ್ ಫಾದ್ ಕೋಬಾದ್ ಗಾಂಧಿಯನ್ನು ಬಂಧಿಸಿರುವ ನಕ್ಸಲರ ಕೋಪ ನೆತ್ತಿಗೇರುವಂತೆ ಮಾಡಿದೆ. ಇದರಿಂದ ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಜನಸಾಮಾನ್ಯರು ನೆಮ್ಮದಿಯನ್ನು ನಕ್ಸಲರು ತಿಂದು ಹಾಕಿರುವುದು ಸುಳ್ಳಲ್ಲ.

ಇಂದು ಬೆಳಗಿನ ಜಾವ 2.30 ಸುಮಾರಿಗೆ ಕಲ್ಲಿದ್ದಲು ನಿಕ್ಷೇಪ ಇರುವ ಧನಬಾದ್ ರೈಲ್ವೆ ನಿಲ್ದಾಣದ ಬಳಿ ನಕ್ಸಲರು ರೈಲು ಹಳಿಯನ್ನು ಸ್ಫೋಟಗೊಳಿಸಿದ್ದಾರೆ. 12 ಸಶ್ತ್ರಸಜ್ಜಿತ ಮಾವೋವಾದಿಗಳು ಈ ಕೃತ್ಯ ಎಸಗಿದ್ದು, ಇದರಿಂದ ಶಕ್ತಿಪುಂಜ್ ಎಕ್ಸ್ ಪ್ರೆಸ್ ರೈಲಿಗೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು ಎಂದು ಧನಬಾದ್ ರೈಲ್ವೆ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮರೇಂದ್ರ ದಾಸ್ ಸ್ಪಷ್ಟಪಡಿಸಿದ್ದಾರೆ. ಗಿರಿದ್ ರಸ್ತೆಯಲ್ಲಿ ಮರಗಳನ್ನು ಕಡಿದು ಅಡ್ಡಗಟ್ಟಿ ಮೂರು ಲಾರಿಗಳನ್ನು ಸುಟ್ಟು ಹಾಕಿದ್ದಾರೆ. ಸ್ಫೋಟ ಸಾಮಗ್ರಿಗಳನ್ನು ಇರಿಸಿ ಸ್ಫೋಟ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X