ಸೋಮವಾರ ಆಟೋ ಚಾಲಕರ ಮುಷ್ಕರ

ಆಟೋಗಳಿಗೆ ಹಸಿರು ಬಣ್ಣಕ್ಕೆ ಬದಲಾಯಿಸಬೇಕೆಂಬ ನಿರ್ಧಾರಕ್ಕೆ ವಿರೋಧ. ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸಾರಿಗೆ ಇಲಾಖೆ ನಿಲ್ಲಿಸಬೇಕು. ಡಿಜಿಟಲ್ ಮೀಟರ್ ಹಾಗೂ ಸ್ಮಾರ್ಟ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ಸಿಂಪ್ಯೂಟರ್ ಕೇಸ್ ಗಳನ್ನು ಕಡ್ಡಾಯವಾಗಿ ವಜಾ ಮಾಡಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಮುಷ್ಕರಕ್ಕೆ ಇಳಿದಿದ್ದಾರೆ.
ಆಟೋ ರಿಕ್ಷಾ ಚಾಲಕರ ಸಂಘ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಜಯಕರ್ನಾಟಕ ಆಟೋ ಘಟಕ ಸೇರಿದಂತೆ ಹಲವಾರು ಆಟೋ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ. ಸುಮಾರು 1 ಲಕ್ಷ ಆಟೋ ಚಾಲಕರು ಮುಷ್ಕರದಲ್ಲಿ ನಿರತರಾಗಿದ್ದಾರೆ.
ಸರಿ ಸುಮಾರು 80 ಸಾವಿರಕ್ಕೂ ಹೆಚ್ಚು ಆಟೋಗಳು ಇಂದು ರಸ್ತೆಗಿಳಿಯುವುದಿಲ್ಲ. ಆಟೋ ಪ್ರಯಾಣಿಕರು ಪರದಾಟ ತಪ್ಪಿದ್ದಲ್ಲ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಬಹುತೇಕ ಕಡೆ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications