ಚೀಫ್ ಸೆಕ್ರಟರಿ ಪ್ಲಾನ್ ವರ್ಕೌಟ್ ಆಯ್ತು, ಸಿಎಂ
ಬೆಂಗಳೂರು,
ಅ. 8 : ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರ ಕಾಲ್ಗುಣ ಚೆನ್ನಾಗಿದೆ ಅಂತ ಕಾಣುತ್ತೆ, ನಿರೀಕ್ಷೆಗೆ ಮೀರಿ ನೆರೆ ಪರಿಹಾರಕ್ಕೆ ನೆರವು, ಸಹಕಾರದ ಮಹಾಪೂರವೇ ಹರಿದು ಬರುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಬಗ್ಗೆ ಪ್ರಶಂಸೆಯ ಮಾತನಾಡಿದ್ದಾರೆ. ಬುಧವಾರ ಯಡಿಯೂರಪ್ಪ ಅವರು ಸಚಿವರೊಂದಿಗೆ ನಡೆಸಿ ಪಾದಯಾತ್ರೆಯಲ್ಲಿ ಸುಮಾರು 500 ಕೋಟಿ ರುಪಾಯಿಗಳು ನಿಧಿ ಸಂಗ್ರಹವಾಗಿದೆ ಎಂದು ಸಕಕಾರಿ ಮೂಲಗಳು ತಿಳಿಸಿವೆ. id="toptextpromo">ನೆರೆ
ಅನಾಹುತ ಮತ್ತು ಉತ್ತರ ಕರ್ನಾಟಕದ ಹದಗೆಟ್ಟ ಜನಜೀವನ ಕಂಡು ಕಂಗಾಲಾಗಿ ಹೋಗಿದ್ದೆ. ಇಂತಹ ಕಷ್ಟ ಕಾಲದಲ್ಲಿ ಇಷ್ಟೊಂದು ನೆರವು ಸಿಗುತ್ತದೆ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ಆದರೆ ನಮ್ಮ ಚೀಫ್ ಸೆಕ್ರೆಟರಿ ಚೆನ್ನಾಗಿ ಪ್ಲಾನ್ ಮಾಡಿ ಎಲ್ಲಾ ಕಡೆಯಿಂದ ನೆರವು ಬರುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಯಡಿಯೂರಪ್ಪ ಪ್ರಶಂಶೆಯ ಮಾತನಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications