ಪ್ರವಾಹ : ಸಾರ್ವಜನಿಕರಿಗೆ ಸೂಚನೆ
ಹಾವೇರಿ, ಅ, 7 : ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ವಾಂತಿ-ಬೇಧಿ ಪ್ರಕರಣಗಳು ವರದಿಯಾಗುತ್ತಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಕೆಲವು ನಿಯಮಗಳನ್ನು ಪಾಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೋರಿದ್ದಾರೆ.
ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು, ಬಿಸಿಬಿಸಿ ಆಹಾರ ಸೇವೆನ ಮಾಡುವುದು, ತೆರೆದಿಟ್ಟ ಹಾಗೂ ಕರಿದ ಪದಾರ್ಥಗಳನ್ನು ಸೇವಿಸಬಾರದು, ಮನೆಯ ಒಳಗಡೆ ಮತ್ತು ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಂಡು, ಪರಿಸರ ಸ್ವಚ್ಛತೆ ಇರುವಂತೆ ನೋಡಿಕೊಳ್ಳುವುದು, ಕುಡಿಯುವ ನೀರಿನ ಮೂಲಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವು, ಕ್ಲೋರಿನೇಶನ್ ಮಾಡಿದ ನೀರನ್ನು ಮಾತ್ರ ಬಳಕೆ ಮಾಡುವುದು, ಗ್ರಾಮಗಳಲ್ಲಿ ಪ್ರಕರಣಗಳು ಇದ್ದಾಗ ಹೊಟೇಲ್‌ಗಳಲ್ಲಿ ಕರಿದ ಪದಾರ್ಥಗಳನ್ನು ಮಾಡಬಾರದು ಹಾಗೂ ಕುಡಿಯಲು ಬಿಸಿ ನೀರು ಕೊಡುವುದು, ಯಾವುದೇ ಪ್ರದೇಶದಲ್ಲಿ ರೋಗ ತಗುಲಿದ ಲಕ್ಷಣಗಳ ಕಂಡು ಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ವಿಷಯ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಕುಡಿಯುವ ನೀರನ್ನು ಶುದ್ಧೀಕರಿಸಲು ಆರೋಗ್ಯ ಇಲಾಖೆಯಿಂದ ಹೆಲೊಜಿನ್ ಮಾತ್ರ ವಿತರಿಸಲಾಗುವುದು. ಆರೋಗ್ಯ ಇಲಾಖೆಯವರು ಕೈಕೊಂಡ ಸಮೀಕ್ಷೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಾಗ ಸಾರ್ವಜನಿಕರು ಸಹಕರಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳೀಗೆ ಅಗತ್ಯವಿದ್ದಾಗ 108ಗೆ (ಆರೋಗ್ಯ ಕವಚ)ಕರೆ ಮಾಡಿ ಸೇವೆಯನ್ನು ಪಡೆಯಬಹುದು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಈ ಕೆಳಗಿನ ಅಧಿಕಾರಿಗಳನ್ನು ಹಾಗೂ ಕಂಟ್ರೊಲ್ ರೂಮ್ ಸಹಾಯವಾಣಿ 08375-233759 ಸಂಪರ್ಕಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications