ನೆರೆ ಸಂತ್ರಸ್ಥರಿಗೆ ನೆರವಿನ ಮಹಾಪೂರ
ಬೆಂಗಳೂರು, ಅ. 6 : ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿರುವ ಲಕ್ಷಾಂತರ ಮಂದಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪರಿಹಾರ ಕಾರ್ಯಗಳಿಗೆ ಸರಕಾರದ ಜೊತೆ ಕೈಜೋಡಿಸಲು ಸಂಘ ಸಂಸ್ಥೆಗಳು, ಮಠಾಧೀಶರು, ಉದ್ಯಮಿಗಳು, ವೈದ್ಯರು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಾನಾ ವರ್ಗವೇ ಮುಂದೆ ಬರುತ್ತಿದೆ.
ಸೋಮವಾರ (ಅ 5) ವೈಮಾನಿಕ ಸಮೀಕ್ಷೆ ನಡೆಸಿದ ಸೋನಿಯಾ ಗಾಂಧಿ ಮತ್ತು ಗೃಹಸಚಿವ ಚಿದಂಬರಂ ಅವರಿಗೆ ವರದಿಯೊಂದನ್ನು ಸಲ್ಲಿಸಿ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಕೋರಲಾಗಿದೆ ಮತ್ತು ಅಕ್ಟೋಬರ್ 8ರಂದು ದೆಹಲಿಗೆ ಬರುವಂತೆ ಚಿದಂಬರಂ ಸೂಚಿಸಿದ್ದಾರೆಂದು ರಾಜ್ಯ ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದ್ದಾರೆ.
* 50 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಸಾವಿರ ಮನೆ ನಿರ್ಮಿಸುವುದಾಗಿ ಸುತ್ತೂರು ಮಠಾಧೀಶರ ಹೇಳಿಕೆ.
* ಒಂದು ಸಾವಿರ ಮನೆ ನಿರ್ಮಿಸಲು ಹಣಕಾಸು ನೆರವು ನೀಡುವುದಾಗಿ ವೀರೇಂದ್ರ ಹೆಗ್ಗಡೆ ಘೋಷಣೆ.
* ಸಂತ್ರಸ್ತರಿಗೆ ವಸತಿ ಸೌಲಭ್ಯ ನಿರ್ಮಿಸಲು ಹಣಕಾಸು ನೆರವು ನೀಡುವುದಾಗಿ ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ ಹೇಳಿಕೆ.
* ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಹತ್ತು ಲಕ್ಷ ರೂಪಾಯಿಗಳ ಪರಿಹಾರ.
* ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿಗಳ ದೇಣಿಗೆ.
* ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಒಂದು ದಿನದ ವೇತನ ಸುಮಾರು ಐವತ್ತು ಲಕ್ಷ ರೂಪಾಯಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
* ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಹತ್ತು ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿಕೆ.
* ಇ ಎಸ್ ಐ ಸಿ ವೈದ್ಯಾಧಿಕಾರಿಗಳ ಸಂಘ ಒಂದು ದಿನದ ವೇತನ ಪರಿಹಾರ ನಿಧಿಗೆ ನೀಡಿದೆ.
* ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಒಂದು ದಿನದ ವೇತನ ಪರಿಹಾರ ನಿಧಿಗೆ.
* ಬಿಡಿಎ ನೌಕರರ ಸಂಘದಿಂದ ಆರು ದಿನಗಳ ವೇತನ ಮತ್ತು 25 ಲಕ್ಷ ರೂಪಾಯಿ ದೇಣಿಗೆ.
* ವೀರಶೈವ ವಿದ್ಯಾಭಿವೃದ್ದಿ ಸಂಘದಿಂದ 20 ಲಕ್ಷ ರೂಪಾಯಿ ಪರಿಹಾರ ಘೋಷಣೆ.
* ರಾಜ್ಯ ಸರಕಾರಿ ನೌಕರರ ಒಕ್ಕೂಟದ ಒಂದು ದಿನದ ವೇತನ ಪರಿಹಾರ ನಿಧಿಗೆ.
* ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರಿಹಾರ ಕಾಮಗಾರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ.
* ಹಾಸನ ಹಾಲು ಒಕ್ಕೂಟದಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ನಿಧಿಗೆ.
* ಡಾ ರಾಜ್ ಟ್ರಸ್ಟ್ ನಿಂದ ಮತ್ತು ಮಾಜಿ ಸಂಸದ ಅಂಬರೀಷ್ ಅವರಿಂದ ತಲಾ ಐದು ಲಕ್ಷ ರೂಪಾಯಿ ದೇಣಿಗೆ.
* ರಾಜ್ ಚಿತ್ರದ ನಿರ್ಮಾಪಕ ಎನ್ ಕುಮಾರ್ ಅವರಿಂದ ಒಂದು ಲಕ್ಷ ರೂಪಾಯಿ ಪರಿಹಾರ.
* ಚಿತ್ರಮಂದಿರದ ಮಾಲೀಕರು ಮತ್ತು ಕಲಾವಿದರ ಸಂಘದ ವತಿಯಿಂದ 25 ಲಕ್ಷ ರೂಪಾಯಿ ಮತ್ತು ನಿಧಿ ಸಂಗ್ರಹಕ್ಕೆ ರೋಡ್ ಶೋ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications