ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಜಿಲ್ಲೆಗಳಲ್ಲಿ ಪೇಜಾವರ ಶ್ರೀಗಳ ಪ್ರವಾಸ

|
Google Oneindia Kannada News

ಬೆಂಗಳೂರು, ಅ.5: ಪೇಜಾವರದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸೋಮವಾರದಿಂದ ಮಂತ್ರಾಲಯ, ಬಾಗಲಕೋಟ ಸೇರಿದಂತೆ ನೆರೆಪೀಡಿತ ಪ್ರದೇಶಗಳಲ್ಲಿ 4 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿನ ಸಂತ್ರಸ್ತರಿಗೆ ಆಹಾರ, ಬಟ್ಟೆಗಳನ್ನು ವಿತರಿಸಲಿದ್ದಾರೆ. ಭಕ್ತಾದಿಗಳೂ ನೆರವಿಗೆ ಧಾವಿಸುವಂತೆ ಕರೆ ನೀಡಿದ್ದಾರೆ.

ಆಹಾರ, ಬಟ್ಟೆ, ಧಾನ್ಯ ಇಲ್ಲವೆ ಹಣವನ್ನು ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಇಲ್ಲವೆ ಶ್ರೀಮಠದ ಜನತಾ ಕಲ್ಯಾಣ ನಿಧಿ'ಗೆ ದೇಣಿಗೆ ನೀಡಬಹುದು. ಚೆಕ್, ಡಿ.ಡಿ ಇಲ್ಲವೆ ನಗದು ಹಣವನ್ನು (80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ) ಕಳುಹಿಸಬೇಕಾದ ವಿಳಾಸ:
ಜನತಾ ಕಲ್ಯಾಣ ನಿಧಿ',
ಎಸ್.ಬಿ ನಂ: 12112, ಕೆನರಾಬ್ಯಾಂಕ್,
ಗಿರಿನಗರ ಶಾಖೆ, ಬೆಂಗಳೂರು.
ಹೆಚ್ಚಿನ ಮಾಹಿತಿಗೆ:9845013336(ಡಿ.ಪಿ.ಅನಂತ್) ಇಲ್ಲವೆ
(080)- 26791236 (ಕೇಶವಾಚಾರ್) ಸಂಪರ್ಕಿಸಬಹುದು.

ಜೆಡಿಎಸ್ ಸಮರ್ಪಣೆ
ಜೆಡಿಎಸ್ ಶಾಸಕರು, ಸಂಸದರು ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ. ಸಂಸದ ಚೆಲುವರಾಯಸ್ವಾಮಿ, ಈ ವಿಷಯವನ್ನು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರವಾಹ ಪೀಡಿತ 8 ಜಿಲ್ಲೆಗಳಲ್ಲಿ ಅ.8ರಿಂದ 15ರವರೆಗೆ ಜೆಡಿಎಸ್ ಮುಖಂಡರು ಪ್ರವಾಸ ಕೈಗೊಂಡು ಪರಿಹಾರಗಳ ವಸ್ತುಗಳನ್ನು ವಿತರಿಸಲಿದ್ದಾರೆ ಎಂದು ವಿವರಿಸಿದರು.

10 ಕೋಟಿ ರೂ. ಸಂಗ್ರಹ
ಸಂತ್ರಸ್ತರ ನೆರವಿಗೆ ಜೆಡಿಎಸ್ ಅಂದಾಜು 10 ಕೋಟಿ ರೂ. ಸಂಗ್ರಹಿಸಲು ತೀರ್ಮಾನಿಸಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಿಂದಲೇ 2 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದರು. ಮುಖಂಡರಾದ ಸಿ.ನಾರಾಯಣ ಸ್ವಾಮಿ, ವೈ.ಎಸ್.ವಿ.ದತ್ತ, ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

(ಸ್ನೇಹ ಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X