ಮಂತ್ರಾಲಯ : ನೀರಲ್ಲಿ ಮುಳುಗಿದ ರಾಯರ ಮಠ

ನಾಲ್ಕು ವೃಂದಾವನಗಳು ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ರಾಯರ ಬೃಂದಾವನದಲ್ಲಿಯೂ ಒಂದು ಅಡಿ ಮಟ್ಟಕ್ಕೆ ನೀರು ಸುತ್ತುವರಿದಿದೆ. ಈ ಹಿನ್ನೆಲೆಯಲ್ಲಿ ಗೋವುಗಳನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗಿದೆ. ಪೂರ್ಣಮಠ, ಪ್ರಕಾರ ಬೋಜನೆ ಶಾಲೆಯನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ಥರಾಗಿರುವ ನಗರದ 6 ಸಾವಿರ ಜನರಿಗೆ ಮಠದಿಂದ ಗುರುವಾರ ರಾತ್ರಿಭೋಜನ ವ್ಯವಸ್ಥೆ ಮಾಡಲಾಗಿತ್ತು.
ರಾಯಚೂರು-ಮಂತ್ರಾಲಯ ಅಂತಾರಾಜ್ಯ ಹೆದ್ದಾರಿ ಜಲಾವೃತವಾಗಿದ್ದು ಸಂಚಾರ ಸ್ಥಗಿತವಾಗಿದೆ. ಇದುವರೆವಿಗೂ ಆಹಾರ ನೀರಿಲ್ಲದೆ ಜನರು ಪ್ರಾಣಭೀತಿಯಿಂದ ನರಳುತ್ತಿದ್ದಾರೆ. ಜಿಲ್ಲಾಡಳಿತದಿಂದ ಯಾವುದೇ ನೆರವಿನ ಹಸ್ತ ದೊರೆತಿಲ್ಲ ಎಂದು ಮಂತ್ರಾಲಯದಿಂದ ರಘುನಂದನಾಚಾರ್ಯ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications