ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ನಿಮಿಷದಲ್ಲಿ 7 ಉಪಗ್ರಹ ಉಡಾಯಿಸಿದ ಇಸ್ರೋ

By Staff
|
Google Oneindia Kannada News

ಶ್ರೀಹರಿಕೋಟ, ಸೆ. 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ(ಸೆ. 23) ಮತ್ತೊಂದು ಮೈಲಿಗಲ್ಲನ್ನು ದಾಟಿತು. 1,200 ಸೆಕೆಂಡುಗಳಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಾಯಿತು. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಆರು ಅತಿ ಸಣ್ಣ ನ್ಯಾನೋ ಉಪಗ್ರಹಗಳು ಹಾಗೂ ಒಂದು ದೊಡ್ಡ ಉಪಗ್ರಹವನ್ನು ಪಿಎಸ್ ಎಲ್ ವಿ ಮೂಲಕ ಉಡಾಯಿಸಲಾಯಿತು. ಇಂದು ಬೆಳಗ್ಗೆ ಸುಮಾರು 11.51ಕ್ಕೆ ಉಡಾವಣಾ ಕಾರ್ಯಕ್ರಮ ಆರಂಭವಾಯಿತು. ಇದಕ್ಕೂ ಮುನ್ನ 51 ಗಂಟೆಗಳ ಕ್ಷಣಗಣನೆ ಸೋಮವಾರ ಬೆಳಗ್ಗೆ 9ಕ್ಕೆ ಆರಂಭಗೊಂಡಿತ್ತು.

2008 ರ ಏಪ್ರಿಲ್ ನಲ್ಲಿ ಇಸ್ರೋ ಇದೇ ರೀತಿ 10 ಉಪಗ್ರಹಗಳನ್ನು ಒಟ್ಟಿಗೆ ಕಕ್ಷೆಗೆ ಹಾರಿಬಿಟ್ಟಿತ್ತು. ಇಂದು ಉಡಾವಣೆಗೊಂಡ ಆರು ನ್ಯಾನೋ ಉಪಗ್ರಹಗಳಲ್ಲಿ ನಾಲ್ಕು ಜರ್ಮನಿ ಹಾಗೂ ಸ್ವಿಜರ್ ಲ್ಯಾಂಡ್ , ಟರ್ಕಿ ದೇಶದ ತಲಾ ಒಂದು ಉಪಗ್ರಹ ಸೇರಿದೆ.ಭಾರತದ ದೊಡ್ಡ ಉಪಗ್ರಹ 960 ಕೆಜಿ ತೂಕದ ಓಷನ್ ಸ್ಯಾಟ್-2 ಮೊದಲು ಉಡಾವಣೆಗೊಂಡಿತು. ನಂತರದಲ್ಲಿ 45 ಸೆ. ಗಳಲ್ಲಿ ಉಳಿದ ಆರು ನ್ಯಾನೋ ಉಪಗ್ರಹಗಳು ಆಕಾಶದತ್ತ ಮುಖ ಮಾಡಿ ಹೊರಟವು.

ಭಾರತದ 16 ನೆ ದೂರಸಂವೇದಿ ಉಪಗ್ರಹವಾದ ಓಷನ್ ಸ್ಯಾಟ್ -2 , ಸಂಭಾವ್ಯ ಮೀನುಗಾರಿಕಾ ವಲಯಗಳ ಗುರುತಿಸುವಿಕೆ, ಸಮುದ್ರದ ಏರುಪೇರುಗಳ ಮುನ್ಸೂಚನೆ, ಕರಾವಳಿ ವಲಯದ ಅಧ್ಯಯನ, ಉಷ್ಣಾಂಶ, ಗಾಳಿವೇಗ, ಆರ್ದ್ರತೆ ಸೇರಿದಂತೆ ಹವಾಮಾನಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ನೆರವಾಗಲಿದೆ. ಉಳಿದ ಆರು ಸಣ್ಣ ಉಪಗ್ರಹಗಳು ಹೊಸ ತಂತ್ರಜ್ಞಾನ ಪರೀಕ್ಷೆ ಉದ್ದೇಶದ ಶೈಕ್ಷಣಿಕ ಉಪಗ್ರಹಗಳಾಗಿವೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X