ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪು ಸುಲ್ತಾನ್ ಸ್ಮರಣಾರ್ಥ ಚಿತ್ರಕಲಾ ಶಿಬಿರ

By Staff
|
Google Oneindia Kannada News

Freedom struggle
ಬೆಂಗಳೂರು, ಸೆ.20: ಭಾರತ ಸ್ವಾತಂತ್ರ್ಯ ಸಂಗ್ರಾಮದ 150 ನೇ ವರ್ಷಾಚರಣೆ ಹಾಗೂ ಟಿಪ್ಪು ಸುಲ್ತಾನ್ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಕರ್ನಾಟಕ ಕಲಾ ಗ್ರಾಮದಲ್ಲಿ ಸೆ.20 ರಿಂದ 26 ರವರೆಗೆ ಚಿತ್ರಕಲಾ ಶಿಬಿರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ರಾಜ್ಯದಾದ್ಯಂತ 30 ಮಂದಿ ವಿವಿಧ ಹಿರಿಯ ಹಾಗೂ ಹೆಸರಾಂತ ಚಿತ್ರಕಲಾವಿದರುಗಳು ಭಾಗವಹಿಸಿ ಕಲಾಕೃತಿಗಳನ್ನು ರಚಿಸಲಿದ್ದಾರೆ. ಸೆಪ್ಟೆಂಬರ್ 26 ರಂದು ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
****
ಎಚ್ 1ಎನ್1 ರೋಗಕ್ಕೆ ನಿಗದಿತ ಅಂಗಡಿಗಳಲ್ಲಿ ಔಷಧಿ ಮಾರಾಟ

ಬೆಂಗಳೂರು: ಭಾರತ ಸರ್ಕಾರವು ಎಚ್ 1ಎನ್1 ರೋಗದ ಮುಂಜಾಗರೂಕತೆ/ನಿವಾರಣೆಗೆ ಸಂಬಂಧಿಸಿದ ಔಷಧಿಗಳಾದ Oseltamivir (Tamiflu) ಮತ್ತು Zanamivir ನಿಗಧಿತ ಅಂಗಡಿಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಿದೆ. ಸಧ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ 48 ಚಿಲ್ಲರೆ ಅಂಗಡಿಗಳು ಮತ್ತು 22 ಸಗಟು ವ್ಯಾಪಾರಸ್ಥರು ಈ ಔಷಧಿಗಳನ್ನು ಮಾರಾಟ ಮಾಡಲು ಪರವಾನಿಗೆಗಳನ್ನು ಹೊಂದಿದ್ದು ಅವರುಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಅನುಮತಿ ನೀಡಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****
ಸ್ವಿಸ್ ತಂಡದಿಂದ ರಾಕ್‌ಬ್ಯಾಂಡ್ ಸಂಗೀತ ಕಾರ್ಯಕ್ರಮ

ಬೆಂಗಳೂರು: ಸೆಪ್ಟೆಂಬರ್ 23 ರಂದು ಸಂಜೆ 7.30 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ರಾಜ್ಯ ವಾರ್ತಾ ಇಲಾಖೆಯ ಮತ್ತು ಸಿಎಫ್‌ಡಿ ವತಿಯಿಂದ ಸ್ವೀಡನ್‌ನ ಜೊಹಾನ್ ಕುಲ್‌ಬರ್ಗ್ ಮತ್ತು ತಂಡದಿಂದ ಅಕಾರ್ಡಿಂಗ್ ರಾಕ್‌ಬ್ಯಾಂಡ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪಾಪ್ ಸಂಗೀತ ಮತ್ತು ನಮ್ಮದೇ ಜನಪದ ಸಂಗೀತ ಎರಡರ ಮಿಳಿತವಾದ ಸಂಗೀತ ರೂಪವನ್ನು ಈ ರಾಕ್‌ಬ್ಯಾಂಡ್ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತಿದ್ದು ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X