ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಆಧಾರಿತ ಪ್ರಾತಿನಿಧ್ಯಕ್ಕೆ ಒಕ್ಕಲಿಗರ ಆಗ್ರಹ

By Staff
|
Google Oneindia Kannada News

 BJP's Vakkaliga leaders meeting in Bengaluru
ಬೆಂಗಳೂರು, ಸೆ. 16 : ಬಿಜೆಪಿಯಲ್ಲಿರುವ ಒಕ್ಕಲಿಗ ಮುಖಂಡರು ಕಳೆದ ರಾತ್ರಿ ನಗರದಲ್ಲಿ ಪ್ರತ್ಯೇಕ ಸಭೆ ಸೇರಿ ಪಕ್ಷ ಮತ್ತು ಸರಕಾರದಲ್ಲಿ ಸಮಾನ ಅಧಿಕಾರ ಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳುವ ಮೂಲಕ ಪಕ್ಷದಲ್ಲಿ ಹೊಸ ಬೆಳವಣಿಗೆಗೆ ಕಾರಣರಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌದ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಶಾಸಕರು, ಸಂಸದರು, ಮಾಜಿ ಶಾಸಕರು, ಕಳೆದ ವಿಧಾನಸಭೆಯಲ್ಲಿ ಸೋತವರು ಭಾಗವಹಿಸಿದ್ದರು. ಪಕ್ಷ, ಸರಕಾರದಲ್ಲಿ ತಮ್ಮ ಜಾತಿಗೆ ಲಭ್ಯವಾಗುತ್ತಿರುವ ಅವಕಾಶಗಳ ಕುರಿತು ಪರಾಮರ್ಶೆ ನಡೆಸಿದರು.

ನಮ್ಮ ನಾಯಕರು ಯಡಿಯೂರಪ್ಪ. ಅವರ ನಾಯಕತ್ವದ ವಿರುದ್ಧ ಯಾವುದೇ ಅಪಸ್ವರವಿಲ್ಲ. ಆದರೆ, ನಮ್ಮ ಜನಾಂಗಕ್ಕೂ ಸಮಪಾಲು ಸಿಗಬೇಕು ಎನ್ನುವ ನಿರ್ಣಯಕ್ಕೆ ಬರಲಾಗಿದೆ. ಸಭೆಗೆ ರಾಮಚಂದ್ರೇಗೌಡ ಸೇರಿದಂತೆ 60 ಮಂದಿ ಬಿಜೆಪಿಯ ಒಕ್ಕಲಿಗ ಮುಖಂಡರು ಪಾಲ್ಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X