ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಶಿರಾಡಿಘಾಟ್ ಗೆ ’ಕಾಂಕ್ರೀಟ್ ಪರಿಹಾರ’

By Staff
|
Google Oneindia Kannada News

ನವದೆಹಲಿ, ಆ. 28 : ಕಬ್ಬಿಣದ ಅದಿರಿನ ಅತಿಯಾದ ಭಾರಹೊತ್ತ ಲಾರಿಗಳ ಸಂಚಾರದಿಂದ ಹೊಂಡದಂತಾಗಿರುವ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿಘಾಟ್ ಭಾಗದ 24 ಕಿ.ಮೀಗಳ ಉದ್ದದ ರಸ್ತೆ ಸದ್ಯದಲ್ಲೇ ಕಾಂಕ್ರೀಟ್ ಪರಿಹಾರ ಕಾಣಲಿದೆ.

115 ಕೋಟಿ ರುಪಾಯಿ ವೆಚ್ಚದ ಈ ಪ್ರಸ್ತಾಪಕ್ಕೆ ಕೇಂದ್ರ ಸರಕಾರ ತಾಂತ್ರಿಕ ಅನುಮೋದನೆ ನೀಡಿದೆ. ಲೋಕೋಪಯೋಗಿ ಸಚಿವ ಸಿ ಎ೦ ಉದಾಸಿ, ಕೇಂದ್ರ ಸಾರಿಗೆ ಸಚಿವ ಕಮಲ್ ನಾಥ್ ಅವರನ್ನು ಮಾಡಿದ ಭೇಟಿ ಫಲಪ್ರದವಾಗಿದ್ದು, ಹೆದ್ದಾರಿಯ ಈ ಭಾಗ ಆರ೦ಭವಾಗುವ ಮುನ್ನ "ಒವರ್ ಲೋಡ್" ಗೆ ಕಡಿವಾಣ ಹಾಕಲು ಲಾರಿಗಳನ್ನು ತೂಕ ಮಾಡುವ "ತೂಕಸೇತು" ವನ್ನು ನಿರ್ಮಿಸುವ ಪ್ರಸ್ತಾಪಕ್ಕೂ ಅನುಮತಿ ದೊರೆತಿದೆ.

ಕೇ೦ದ್ರ ಸರಕಾರ ಈ ಹಿ೦ದೆ 30 ಕೋಟಿ ರುಪಾಯಿ ಮ೦ಜೂರು ಮಾಡಿತ್ತು. ಆದರೆ ರಾಜ್ಯ ಸರಕಾರ ಬರೀ ಎರಡು ಕಿ.ಮೀ ಕಾ೦ಕ್ರೀಟ್ ರಸ್ತೆ ನಿರ್ಮಿಸಿ ಉಳಿದ೦ತೆ ಟಾರ್ ರಸ್ತೆ ಹಾಕಿ ಕೈತೊಳೆದುಕೊ೦ಡಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X