ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಸಿಬ್ಬಂದಿ ಉಪವಾಸ ಸಂಬಳಾಗ್ರಹ

By Staff
|
Google Oneindia Kannada News

AI hunger strike
ನವದೆಹಲಿ, ಆ. 25: ಸಂಬಳ ಕಡಿತ ಹಾಗೂ ವಿಳಂಬದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯ ಸುಮಾರು 20 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಇಂದಿನಿಂದ ಮೂರು ದಿನಗಳ ಉಪವಾಸ ಮುಷ್ಕರ ಹೂಡುತ್ತಿದ್ದಾರೆ.

ಸುಮಾರು 20 ಸಾವಿರಕ್ಕೂ ಅಧಿಕ ವಿಮಾನಯಾನ ಉದ್ಯೋಗಿಗಳು ಉಪವಾಸ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಇತರೆ ವಿಮಾನಯಾನ ನೌಕರರ ಸಂಘದ ಬೆಂಬಲ ದೊರೆಯುವ ನಿರೀಕ್ಷೆಯಿದೆ ಸಂಬಳದಲ್ಲಿ ಶೇ.50 ರಷ್ಟು ಕಡಿತ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಸ್ಥೆಯ ಏಳಿಗೆಗೆ ಸತತವಾಗಿ ದುಡಿಯುತ್ತಿರುವ ನೌಕರರಿಗೆ ಈ ರೀತಿ ಮಾಡುವುದು ತರವಲ್ಲ .ಆರ್ಥಿಕ ಪರಿಸ್ಥಿತಿಯ ಅರಿವು ನಮಗೂ ಇದೆ.ಆದರೆ, ಈ ಪಾಟಿ ಸಂಬಳ ಕಡಿತ ಹಾಗೂ ವಿಳಂಬವನ್ನು ಸಹಿಸಿ ಕೆಲಸ ನಿರ್ವಹಿಸಲು ಖಂಡಿತಾ ಸಾಧ್ಯವಿಲ್ಲ ಸರ್ಕಾರ ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಸಂಘದ ಕಾರ್ಯದರ್ಶಿ ಜೆಬಿ ಕಂಡಿಯನ್ ತಿಳಿಸಿದರು.

ಸಂಘದ ಬೇಡಿಕೆಗಳು ಇತ್ಯರ್ಥವಾಗದಿದ್ದರೆ ಆ.31ರಿಂದ ಪುನಃ ಮುಷ್ಕರ ಹೂಡಲಾಗುವುದು ಎಂದು ನೌಕರರ ಸಂಘದ ಇತರ ಮುಖಂಡರು ಹೇಳಿದ್ದಾರೆ. ಈ ಮುಂಚೆ ಜು.3ರಂದು ಏರ್ ಇಂಡಿಯಾ ಉದ್ಯೋಗಿಗಳು ಮುಷ್ಕರ ಹೂಡಿ, ಪ್ರತಿಭಟನೆ ಮೆರವಣಿಗೆ ನಡೆಸಿದ್ದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X