ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಗ್ರಾಹಕ ಸ್ನೇಹಿ ಅಕ್ಕಿ ಸಂತೆ

By Staff
|
Google Oneindia Kannada News

Rice fair in Bangalore
ಬೆಂಗಳೂರು, ಆ.22: ಜನಸಾಮಾನ್ಯರ ನಿತ್ಯಬಳಕೆಯ ಅಕ್ಕಿ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಡುವ ಸಲುವಾಗಿ ಸರ್ಕಾರವು ಅಕ್ಕಿ ಗಿರಣಿ ಮಾಲೀಕರ ಸಹಯೋಗದೊಂದಿಗೆ ನಗರದ ಈ ಕೆಳಕಂಡ ಜನತಾ ಬಜಾರ್ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ಗ್ರಾಹಕ ಸ್ನೇಹೀ "ಅಕ್ಕಿ ಸಂತೆ" ಕಾರ್ಯಕ್ರಮವನ್ನು ಆ.22ರಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾ ಮಂಡಳಿವತಿಯಿಂದ ಹಮ್ಮಿಕೊಳ್ಳಲಾಗಿದೆ.

ಅಕ್ಕಿ ಗಿರಣಿಗಳಿಂದ ನೇರವಾಗಿ ಗ್ರಾಹಕರಿಗೆ ಅಕ್ಕಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸುವ ಸರ್ಕಾರದ ಈ ಪ್ರಯತ್ನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಲಾಗಿದೆ. ನಗರದಲ್ಲಿನ ಜನತಾ ಬಜಾರ ಕೇಂದ್ರಗಳಾದ ಕೆ. ಜಿ. ರಸ್ತೆ, ಏಷಿಯಾಟೆಕ್ ಬಿಲ್ಡಿಂಗ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಬೆಂಗಳೂರು ಸದಾಶಿವನಗರ, ಬೆಂಗಳೂರು, ನಂದಿದುರ್ಗ, ನಂದಿದುರ್ಗ ರಸ್ತೆ, ಬೆಂಗಳೂರು, ಆರ್. ಎಂ.ವಿ. ರಾಜಮಹಲ್ ವಿಲಾಸ್ ಬಡಾವಣೆ, ಬೆಂಗಳೂರು, ಬಿ.ಡಿ.ಎ. ಕಾಂಪ್ಲೆಕ್ಸ್, 8ನೇ ಮುಖ್ಯರಸ್ತೆ, ಬಸವೇಶ್ವರ ನಗರ, ಬೆಂಗಳೂರು, ಹೆಚ್.ಎ.ಎಲ್. ಓಲ್ಡ್ ಟೌನ್ ಶಿಪ್, ವಿಮಾನಪುರ, ಬೆಂಗಳೂರು ಈ ಕೇಂದ್ರಗಳಲ್ಲಿ ಲಭ್ಯವಿರುವ ಬಿ.ಟಿ. ಸೋನಾ, ಗಂಗಾ ಸೋನಾ, ಫೈನ್ ಸೋನಾ ಅಕ್ಕಿಯನ್ನು ಕ್ರಮವಾಗಿ ರು.20, 25 ರೂ, 28 ರೂ ಗಳಿಗೆ ಮಾರಾಟ ಮಾಡಲಾಗುತ್ತದೆಯಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X