ಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಚಾಟನೆ

ಸಿಮ್ಲಾದಲ್ಲಿ ನಡೆದ ಬಿಜೆಪಿ ಚಿಂತನೆ ಬೈಠಕ್ ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿನ್ನಾ ಇಂಡಿಯಾ ಪಾರ್ಟಿಶನ್ ಎಂಬ ಪುಸ್ತಕ ಬರೆದಿದ್ದ ಜಸ್ವಂತ್ ಸಿಂಗ್ ಪಾಕಿಸ್ತಾನದ ರಾಷ್ಟ್ರಪಿತ ಮೊಹ್ಮದ್ ಅಲಿ ಜಿನ್ನಾ ಅವರನ್ನು ಶ್ಲಾಘನೆ ಮಾಡಿದ್ದರು. ಅಷ್ಟೆ ಅಲ್ಲ, ಜಿನ್ನಾ ಒಬ್ಬ ದೇಶಭಕ್ತ, ಅವರಿಗೆ ದೇಶ ವಿಭಜನೆ ಮಾಡುವ ಮನಸ್ಸಿರಲಿಲ್ಲ.
ಆದರೆ, ಜವಾಹರ್ ಲಾಲ್ ನೆಹರು ಅವರು ಪ್ರಧಾನಿ ಆಗಬೇಕು ಎನ್ನುವ ವಿಷಯ ಜಟಿಲವಾದ ಹಿನ್ನೆಲೆಯಲ್ಲಿ ದೇಶ ವಿಭಜನೆಯಾಯಿತು. ಅಲ್ಲದೇ ಭಾರತದ ರಾಷ್ಟ್ರಪಿತ ಮಹಾತ್ಮಗಾಂಧಿ ಕೂಡಾ ಜಿನ್ನಾ ಅವರನ್ನು ಕೊಂಡಾಡಿದ್ದರು. ಅದರ ಜೊತೆಗೆ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರನ್ನು ಪುಸ್ತಕದಲ್ಲಿ ಟೀಕಿಸಲಾಗಿತ್ತು.
ಜಸ್ವಂತ್ ಸಿಂಗ್ ಅವರ ಪುಸ್ತಕಕ್ಕೆ ಬಿಜೆಪಿ ಮತ್ತು ಆರ್ ಎಸ್ಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜಸ್ವಂತ್ ಸಿಂಗ್ ವಾದ ಅವರ ವೈಯಕ್ತಿಕ. ಹಾಗೂ ಬಿಜೆಪಿಯ ವಾದವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು.
ಆರ್ಎಸ್ಎಸ್ ನಾಯಕ ಮೋಹನ್ ಭಾಗ್ವತ್ ಕೂಡಾ ಬಿಜೆಪಿ ಅಂತರಿಕ ಕಚ್ಚಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು, ಜಸ್ವಂತ್ ಸಿಂಗ್ ರ ಜಿನ್ನಾ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಪಕ್ಷದೊಳಗೆ ಜಸ್ವಂತ್ ಸಿಂಗ್ ರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದ್ದರಿಂದ ಇಂದು ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ನಡೆದ ಬೈಠಕ್ ನಲ್ಲಿ ಜಸ್ವಂತ್ ಸಿಂಗ್ ಅವರನ್ನು ಉಚ್ಚಾಟನೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
(ಏಜನ್ಸೀಸ್)












Click it and Unblock the Notifications