ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕಾರ್ಫ್ ಧರಿಸಲು ಅನುಮತಿ ಕೊಡಿ : ಆಸ್ಮಿನ್

By Staff
|
Google Oneindia Kannada News

Ayesha Asmin
ಬಂಟ್ವಾಳ, ಆ. 19 : ಕೋಮುಗಲಭೆಗೆ ಹೆಸರುವಾಸಿಯಾಗಿರುವ ಮಂಗಳೂರು ಜಿಲ್ಲೆಯಲ್ಲಿ ಮತ್ತೊಮ್ಮೆ ಕೋಮು ಗಲಭೆಗಳು ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ. ಬಂಟ್ವಾಳದ ಶ್ರೀ ವೆಂಕಟರಮಣಸ್ವಾಮಿ (ಎಸ್ ವಿಎಸ್) ಕಾಲೇಜಿನಲ್ಲಿ ಬುರ್ಕಾ ಧರಿಸಿ ತರಗತಿಗೆ ಹಾಜರಾಗಬಾರದು ಎಂಬ ಕಾಲೇಜಿನ ಆಡಳಿತ ಮಂಡಳಿಯ ನಿಯಮ ಭಾರಿ ವಿವಾದವನ್ನೇ ಸೃಷ್ಟಿಸಿದೆ.

ವೆಂಕಟರಮಣಸ್ವಾಮಿ ಕಾಲೇಜಿನ ಬಿಕಾಂ ತರಗತಿಯಲ್ಲಿ ಕೇವಲ ಇಬ್ಬರು ಮಾತ್ರ ಮುಸ್ಲಿಂ ಹೆಣ್ಣುಮಕ್ಕಳಿದ್ದಾರೆ. ಆದರಲ್ಲಿ ಒಬ್ಬರು ಕಾಲೇಜಿನ ನಿಯಮಕ್ಕೆ ಸಮ್ಮತಿಸಿದರೆ, ಆಯೇಷಾ ಆಸ್ಮಿನ್ ಎನ್ನುವ ವಿದ್ಯಾರ್ಥಿನಿ ಮಾತ್ರ, ತಾನು ಬುರ್ಕಾ ಹಾಕದೇ ತರಗತಿಗೆ ಹಾಜರಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ. ಆಸ್ಮಿನ್ ನಿಲುವಿಗೆ ಆಕೆ ಪೋಷಕರು ಹಾಗೂ ಜಿಲ್ಲೆಯ ಕೆಲ ಮುಸ್ಲಿಂ ಸಂಘಟನೆಗಳು ಬೆಂಬಲಕ್ಕೆ ನಿಂತಿರುವುದರಿಂದ ಬುರ್ಕಾ ಮತ್ತು ಸ್ಕಾರ್ಫ್ ನಿಷೇಧ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಆಯೇಷಾ ಅಸ್ಮಿನ್, ಕಾಲೇಜಿನ ಅಡಳಿತ ಮಂಡಳಿ ವಿನಾಕಾರಣ ನಮಗೆ ತೊಂದರೆ ನೀಡುತ್ತಿದೆ. ಬುರ್ಕಾ ಅಥವಾ ಸ್ಕಾರ್ಫ್ ಧರಿಸಿಯೇ ನಾನು ಕಾಲೇಜಿಗೆ ಹೋಗುವೆ. ನನ್ನ ಧರ್ಮದ ಪ್ರಕಾರ ನಾನು ನಡೆದುಕೊಳ್ಳುತ್ತಿರುವೆ ಎಂದು ವಾದಿಸುತ್ತಿದ್ದಾಳೆ.

ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ನಂತರ ಕಾಲೇಜಿನಲ್ಲಿ ಚುನಾವಣೆಗಳು ಆರಂಭವಾದವು. ಬಿಕಾಂ ಅಂತಿಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭರತ್ ಎಂಬ ವಿದ್ಯಾರ್ಥಿ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಆಲ್ಲಿಂದ ಈ ಸಮಸ್ಯೆ ಆರಂಭವಾಗಿದೆ. ಕಾಲೇಜಿಗೆ ಬುರ್ಕಾ ಅಥವಾ ಸ್ಕಾರ್ಫ್ ಧರಿಸಿ ಬರಬಹುದು. ಆದರೆ, ತರಗತಿಯಲ್ಲಿ ಮಾತ್ರ ಮುಖವಾಡ ಧರಿಸುವ ಹಾಗಿಲ್ಲ. ಮುಖ ಮುಚ್ಚಿಕೊಂಡು ತರಗತಿಯಲ್ಲಿ ಹಾಜರಾಗುವುದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ನನಗೆ ಭರತ್ ಎಚ್ಚರಿಕೆ ನೀಡಿದ. ನಂತರ ಕೆಲವೇ ದಿನಗಳಲ್ಲಿ ಕಾಲೇಜಿನ ಆಡಳಿತ ಮಂಡಳಿ ಬುರ್ಕಾ ಅಥವಾ ಸ್ಕಾರ್ಫ್ ನಿಷೇಧವನ್ನು ಅಧಿಕೃತಗೊಳಿಸಿತು ಎಂದು ಹೇಳಿದ್ದಾರೆ.

ನಾನು ಚಾರ್ಟರ್ಡ್ ಆಕೌಟೆಂಟ್ ಆಗಬೇಕು ಎಂಬ ಕನಸಿದೆ. ಇದೇ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಬೇಕು ಎಂಬ ಆಸೆ ಇದೆ. ಆದರೆ, ನನಗೆ ಇಲ್ಲಿ ಸಮಸ್ಯೆ ತಲೆದೋರಿದೆ ಎನ್ನುವುದು ಅಯೇಷಾ ಅಳಲಾಗಿದೆ. ಆದರೆ, ಕಾಲೇಜಿನ ಆಡಳಿತ ಮಂಡಳಿ ಬುರ್ಕಾ ನಿಷೇಧ ನಿಯಮವನ್ನು ಎಲ್ಲರಿಗೂ ಅನ್ವಯವಾಗಲಿದೆ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಯಾವುದೇ ಧರ್ಮದವರಾಗಲೀ ವಿದ್ಯಾರ್ಥಿಗಳು ಶಿಕ್ಷಣ ನೀತಿಗೆ ಒಳಪಡಬೇಕು. ಆದರೆ, ಆಯೇಷಾ ಮಾತ್ರ ಪಟ್ಟು ಬಿಡದಿರುವುದು ವಿವಾದವನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X