38324ಉಪಚುನಾವಣೆಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38324ಉಪಚುನಾವಣೆಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg38324ಉಪಚುನಾವಣೆಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg38324ಉಪಚುನಾವಣೆಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg38324ಉಪಚುನಾವಣೆಗೌಡರ ಮಾನ ಕಾಪಾಡಿದ ಸೊಸೆ ಅನಿತಾ/news/2008/12/30/anitha-kumarswamy-trounce-chennigappa-in-madhugiri.htmlತುಮಕೂರು, ಡಿ. 30 : ಒಂದಡೆ ಆಡಳಿತ ಪಕ್ಷ ಬಿಜೆಪಿಯ ಆನೆಬಲ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಡ್ಡಗಾಲು. ಇವೆರಡರ ನಡುವೆ ಜಿಗಿದುಬಂದ ಕುದುರೆ ಜೆಡಿಎಸ್. ಚುನಾವಣಾ ಪಗಡೆಪಣಕ್ಕಿಟ್ಟ ದ್ರೌಪದಿ ಎಂಬ ಅಪಹಾಸ್ಯದ ಮಾತುಗಳನ್ನು ನುಂಗಿಕೊಂಡೇ ಮಧುಗಿರಿ ಕೋಟೆಯನ್ನು ಭೇದಿಸಿದವರು ಅನಿತಾ ಕುಮಾರಸ್ವಾಮಿ. ರಾಜಕೀಯ ಚದುರಂಗದಾಟದಲ್ಲಿ ಅಂತಿಮವಾಗಿ ಅವರು ಮಾವ ದೇವೇಗೌಡರು ಮತ್ತು ಗಂಡ ಕುಮಾರಸ್ವಾಮಿಯ ಮಾನ 33775http://kannada.oneindia.com/img/2008/12/30-anita-kumaraswamy1e.jpg38318ಯಡಿಯೂರಪ್ಪಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38318ಯಡಿಯೂರಪ್ಪಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg38318ಯಡಿಯೂರಪ್ಪಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ/news/2009/01/02/kannada-implementation-is-yeddyurappa-resolution.htmlಬೆಂಗಳೂರು, ಜ. 2 : ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, 33824http://kannada.oneindia.com/img/2009/01/02-kannada-anustana-varsha.jpg38318ಯಡಿಯೂರಪ್ಪನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg38318ಯಡಿಯೂರಪ್ಪಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpg52075ಮತದಾನಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg52075ಮತದಾನಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg52075ಮತದಾನತಂದೆತಾಯಿ ಓಟಾಕಿದರೆ ಮಕ್ಕಳಿಗೆ ಅಂಕಗಳು/news/2009/04/10/make-parents-vote-get-two-grace-marks-in-civics.htmlಪುಣೆ, ಏ.10: ಮತ ಚಲಾಯಿಸುವುದು ಪ್ರಜೆಗಳ ಹಕ್ಕು ಎಂದು ಎಷ್ಟು ಮಂದಿ ಪ್ರಚಾರ ಮಾಡಿದರೂ ವಿದ್ಯಾವಂತರನ್ನು ದಾರಿಗೆ ತರುವುದು ಸ್ವಲ್ಪ ಕಷ್ಟದ ಕೆಲಸ. ಈ ಸಮಸ್ಯೆಗೆ ಸುಲಭ ಮಾರ್ಗವೊಂದನ್ನು ಪುಣೆಯ ಶಾಲೆಯೊಂದು ಕಂಡುಕೊಂಡಿದೆ.ಮತದಾನದ ಮಹತ್ವವನ್ನು ಬರೀ ಪಾಠಗಳಿಗಷ್ಟೇ ಸೀಮಿತಗೊಳಿಸದೆ ಅದನ್ನು ಆಚರಣೆಗೆ ತರಲು ಯೋಚಿಸಿತು. ತಂದೆ ತಾಯಿಯರೊಂದಿಗೆ ಮತದಾನ ಮಾಡಿಸುವ ವಿದ್ಯಾರ್ಥಿಗಳಿಗಳಿಗೆ 'ಪೌರನೀತಿ' ವಿಷಯದ 35869http://kannada.oneindia.com/img/2009/04/10-ballot-box2.jpg52075ಮತದಾನನಗೆಯು ಬರುತಿದೆ ನಮಗೆ ನಗೆಯು ಬರುತಿದೆ.../column/manikanth/2009/0415-open-letter-to-karnataka-politicians.htmlಸಂಸದರಾಗುವ ಕನಸಿನೊಂದಿಗೇ ಓಡಾಡುತ್ತಿರುವ ನಾಯಕರುಗಳಿಗೆ-ನಮಸ್ಕಾರ.ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿಯೇ ನೀವು ಮನೆ ಮನೆಯ ಬಾಗಿಲು ತಟ್ಟುತ್ತಿದ್ದೀರಿ. ದೊಡ್ಡವರು, ಚಿಕ್ಕವರು, ಮುದುಕರು, ಮಕ್ಕಳಿಗೂ ಡೈವ್ ಹೊಡೆಯುತ್ತಿದ್ದೀರಿ. ಅಪರಿಚಿತರಿಗೂ ಕೈ ಮುಗಿಯುತ್ತಿದ್ದೀರಿ. ಕಂಡವರ ಮುಂದೆಲ್ಲಾ ಇಷ್ಟಗಲ ಹಲ್ಲು ಕಿಸಿದು, ಅವರ ಕೈ ಹಿಡಿದು- ಇದನ್ನು ಕಾಲು ಅಂತ ತಿಳ್ಕೊಳ್ಳಿ. ಮನೆ ಬಾಗಿಲಿಗೆ ಬಂದು ಭಿಕ್ಷೆ ಕೇಳ್ತಾ 35961http://kannada.oneindia.com/img/2009/04/15-politician2.jpg52075ಮತದಾನಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು/news/2009/04/16/lok-sabha-election-first-phase-naxals-attack.htmlನವದೆಹಲಿ, ಏ. 16 : ಮೊದಲ ಹಂತದ ಚುನಾವಣೆ ನಡೆದ ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ್ ಹಾಗೂ ಒರಿಸ್ಸಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 5 ಮಂದಿ ಚುನಾವಣೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೆಲವಡೆ ಮತದಾನದ ಕೇಂದ್ರಗಳಿಗೆ ನುಗ್ಗಿ ಅಲ್ಲಿದ್ದ ಮತಯಂತ್ರಗಳನ್ನು ಅಪಹರಣ ಮತ್ತು ನಾಶ ಮಾಡಿರುವ ಘಟನೆಗಳು ನಡೆದಿರುವುದು ದೇಶದ 36007http://kannada.oneindia.com/img/2009/04/16-naxal-attack1.jpgnews"> ಉಪಚುನಾವಣೆ : ನಾಳೆ ಅಭ್ಯರ್ಥಿಗಳ ಹಣೆಬರಹ | Bypoll | ADGP A R Infant | Yeddyurappa | Voting | BJP | Congress | JDS| ಉಪಚುನಾವಣೆ : ನಾಳೆ ಅಭ್ಯರ್ಥಿಗಳ ಹಣೆಬರಹ - Kannada Oneindia

ಉಪಚುನಾವಣೆ : ನಾಳೆ ಅಭ್ಯರ್ಥಿಗಳ ಹಣೆಬರಹ

AR Infant
ಬೆಂಗಳೂರು, ಆ. 17 : ಕೊನೆಗೂ ರಾಜ್ಯದ ಐದು ಉಪಚುನಾವಣೆಗಳ ಮತದಾನಕ್ಕೆ ವೇದಿಕೆ ಸಿದ್ದಗೊಂಡಿದೆ. ಆಡಳಿತರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಈ ಚುನಾವಣೆ ಭಾರಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಮನಗರ, ಚಿತ್ತಾಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಗೆಲುವಿನ ವಿಜಯಲಕ್ಷ್ಮಿ ಯಾರಿಗೆ ಒಲಿಯುವಳು ಎನ್ನುವುದು ಮಾತ್ರ ಈವರೆಗೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.

ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಉಪಚುನಾವಣೆಯಲ್ಲಿ ಬಿಜೆಪಿ ಹುರಿಯಾಳು. ಕಳೆದ ಎರಡು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಯೋಗೀಶ್ವರ್, ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ದ ಭಾರಿ ಹಿನ್ನೆಡೆ ಮೂಲಕ ಸೋತಿದ್ದರು. ಅಲ್ಲದೇ ಈ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಇಲ್ಲದಿರುವುದು ಸೋಲಿಗೆ ಪ್ರಮುಖ ಕಾರಣವಾಗಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಯೋಗೀಶ್ವರ್ ಅವರಿಗೆ ರಾಜಕೀಯ ಅಳಿವು ಉಳಿವಿನ ಪ್ರಶ್ನೆ. ಇಲ್ಲಿ ಗೆದ್ದರೆ ಸರಕಾರದಲ್ಲಿ ಸ್ಥಾನ ಸಿಕ್ಕುವ ಸಾಧ್ಯತೆ ಇದೆ. ಆಕಸ್ಮಾತ್ ಆಗಿ ಸೋತರೆ ಯೋಗೀಶ್ವರ್ ಅವರಿಗೆ ಕಾಲವೇ ಉತ್ತರಿಸಲಿದೆ. ಉಳಿದಂತೆ ಗೋವಿಂದರಾಜ ನಗರ ವೈಯಕ್ತಿಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮರ್ಯಾದೆ ಪ್ರಶ್ನೆಯಾಗಿದ್ದು, ಎದುರಾಳಿ ಪ್ರಿಯಾಕೃಷ್ಣ ಪರ ಕಾಂಗ್ರೆಸ್ ನಾಯಕರ ದಂಡು ಗಲ್ಲಿ ಗಲ್ಲಿ ತಿರುಗಿ ಪ್ರಚಾರ ನಡೆಸಿದೆ. ಶತಾಯಗತಾಯ ಸೋಮಣ್ಣ ಅವರನ್ನು ಸೋಲಿಸಲೇಬೇಕು ಎಂಬ ಕಾಂಗ್ರೆಸ್ಸಿಗರ ಗುರಿ ಈಡೇರಿತು ಎನ್ನುವುದು ಸದ್ಯದ ಪ್ರಶ್ನೆ. ಸೋಮಣ್ಣ ಒಳ್ಳೆಯ ಕೆಲಸಗಾರ, ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವು ಖಚಿತ ಎನ್ನುವುದು ದಟ್ಟವಾಗಿ ಹಬ್ಬಿರುವ ಸುದ್ದಿ.

ಕಾಂಗ್ರೆಸ್ಸಿಗರಿಗೆ ಚಿತ್ತಾಪುರ ಕ್ಷೇತ್ರವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ನಾಯಕ ಎನಿಸಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕಡಿಮೆ ಅಂತರದಲ್ಲಿ ಸೋತಿದ್ದ ವಾಲ್ಮೀಕಿ ನಾಯಕ ಇದೀಗ ಅವರ ಮಗ ಪ್ರಿಯಾಂಕಾ ಖರ್ಗೆ ವಿರುದ್ದ ಕದನಕ್ಕೆ ಇಳಿದಿದ್ದಾರೆ. ಬಿಜೆಪಿ, ಕಾಂಗ್ರೆಸ್ಸಿಗರ ದಂಡೇ ಅಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸಿದೆ. ಕಳೆದ ಎಂಟು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ. ಈ ಸಲದ ಐದು ಕ್ಷೇತ್ರಗಳಲ್ಲಿ ಕನಿಷ್ಟ ಮೂರನ್ನಾದರೂ ಕಾಂಗ್ರೆಸ್ ಗೆಲ್ಲಲೇಬೇಕು. ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು ಕ್ಷೇತ್ರಗಳನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಸಿದ್ದರಾಮಯ್ಯ ಇದೀಗ ಪ್ರತಿಪಕ್ಷದ ನಾಯಕ ಬೇರೆ. ಅವರಿಂದಲಾದರೂ ಕಾಂಗ್ರೆಸ್ ಗೆಲುವು ಕಾಣುತ್ತಾ ಎನ್ನುವುದನ್ನು ಕಾದುನೋಡಬೇಕು. ಕಾಂಗ್ರೆಸ್ ಮತ್ತೆ ನೆಲಕಚ್ಚಿದರೆ, ದೇಶಪಾಂಡೆ, ಡಿಕೆಶಿ ಸ್ಥಾನಕ್ಕೆ ಕುತ್ತು ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಉಳಿದಂತೆ ರಾಮನಗರ ಜೆಡಿಎಸ್ ಹಾಗೂ ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ಪಕ್ಷಗಳು ಗೆಲುವು ಸಾಧಿಸುವ ಸಾಧ್ಯತೆಗಳೆ ಹೆಚ್ಚು. ಕಾರಣ ಅಲ್ಲಿ ಬಿಜೆಪಿ ಅಷ್ಟಾಗಿ ತನ್ನ ನೆಲೆ ಕಂಡುಕೊಂಡಿಲ್ಲ. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ ಗಳಗಳಾಂತ ಅತ್ತಿದ್ದು ಕೂಡಾ ರಾಮನಗರದ ಜೆಡಿಎಸ್ ಅಭ್ಯರ್ಥಿಗೆ ವರವಾಗಬಹುದು.

ಬಿಗಿ ಭದ್ರತೆ

ಮಂಗಳವಾರ ನಡೆಸಲಿರುವ ಐದು ಕ್ಷೇತ್ರಗಳ ಮತದಾನ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ್ ಕೈಗೊಂಡಿರುವ ರಾಜ್ಯ ಗೃಹ ಇಲಾಖೆ, ತಮಿಳುನಾಡಿನ ಐದು ವಿಶೇಷ ಸಶಸ್ತ್ರ ಪೊಲೀಸ್ ಪಡೆಯನ್ನು ಕರೆಸಿಕೊಂಡಿದೆ. ಸ್ಥಳೀಯ ಗೋವಿಂಗರಾಜನಗರಕ್ಕೆ ಎರಡು ಕಂಪನಿ, ಚನ್ನಪಟ್ಟಣ, ರಾಮನಗರ, ಕೊಳ್ಳೇಗಾಲ ಕ್ಷೇತ್ರಗಳಿಗೆ ತಲಾ ಒಂದು ಕಂಪನಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಚಿತ್ತಾಪುರ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಿಗೆ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಒಟ್ಟು 1100 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 4,654 ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.

ಸೂಕ್ಷ್ಮ, ಅತಿಸೂಕ್ಷ್ಮ ಸೇರಿದಂತೆ ಐದು ಕ್ಷೇತ್ರಗಳ ಮತಗಟ್ಟೆಗಳಿಗೆ ಸರ್ಪಗಾವಲು ಹಾಕಲು ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋವಿಂದರಾಜನಗರ, ರಾಮನಗರ, ಮತ್ತು ಚನ್ನಪಟ್ಟಣ ಭಾರಿ ಜಿದ್ದಾಜಿದ್ದಿನ ಕ್ಷೇತ್ರಗಳಾಗಿದ್ದು, ಅಹಿತಕರ ಘಟನೆ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎ ಆರ್ ಇನ್ಫಂಟ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+