ಕಾಲೇಜು ಕಟ್ಟಡದಿಂದ ಉರುಳಿ ವಿದ್ಯಾರ್ಥಿ ಸಾವು
ಬೆಂಗಳೂರು, ಆ. 13: ನಗರದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿ ಯೊಬ್ಬ ಕಾಲೇಜು ಕಟ್ಟಡದಿಂದ ಕೆಳಗುರುಳಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬನಶಂಕರಿಯಲ್ಲಿರುವ ದಯಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಪ್ರತೀಕ್ ಕುಮಾರ್ ಠಾಕೂರ್(20) ಮೃತಪಟ್ಟವನು. ಈತ ಟೆಲಿಕಮ್ಯೂನಿಕೇಷನ್ ವಿಭಾಗದ ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದನು. ಮಧ್ಯಾಹ್ನ ಕಾಲೇಜಿನ ಕಟ್ಟಡದ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಹೆಚ್ಚಿನ ವಿಷಯವನ್ನು ತನಿಖೆ ನಂತರ ಬಹಿರಂಗ ಮಾಡಲಾಗುವುದು ಎಂದು ಕುಮಾರಸ್ವಾಮಿ ಲೇಔಟ್ ನ ಪೊಲೀಸರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications