540327assembly byelectionಸಿಪಿ ಯೋಗೀಶ್ವರ್ ಮನೆ ಮೇಲೆ ಐಟಿ ದಾಳಿ/cj/rajesh-kondapura/2009/0721-income-tax-dept-raids-on-cp-yogishwar.htmlಚನ್ನಪಟ್ಟಣ, ಜು. 21 : ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸಿ.ಪಿ. ಯೋಗೀಶ್ವರ್ ಅವರ ಎರಡು ಮನೆಗಳ ಮೇಲೆ ಕೇಂದ್ರೀಯ ತನಿಖಾ ತಂಡ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.ಮುಂಜಾನೆ 6.30ರ ಸಮಯದಲ್ಲಿ ಏಕಕಾಲದಲ್ಲಿ ಯೋಗೀಶ್ವರ್ ಅವರ ಕುವೆಂಪು ನಗರದ 5ನೇ ರಸ್ತೆಯ ಮನೆ ಮತ್ತು 38117http://kannada.oneindia.com/img/2009/07/21-cp-yogishwar1.jpg540327assembly byelectionರಾಮನಗರ : ಬಿ ಫಾರಂ ಇಲ್ಲದೆ ಲಿಂಗಪ್ಪ ನಾಮಪತ್ರ/cj/poornachandra/2009/0725-ramnagar-bypoll-lingappa-files-nomination.htmlರಾಮನಗರ, ಜು. 25 : ಆಗಸ್ಟ್ 18ರಂದು ನಡೆಯುವ ರಾಮನಗರ ಉಪಚುನಾವಣೆ ಕಣ ರಂಗೇರಿದ್ದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಪಕ್ಷದ "ಬಿ" ಫಾರಂ ಇಲ್ಲದೇ ಶುಕ್ರವಾರ ನಾಮಪತ್ರ ಸಲ್ಲಿಸಿದರು.ಉಪಚುನಾವಣೆಗೆ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳು ಯಾರೆಂದು ಅಂತಿಮಗೊಳಿಸಿಲ್ಲ. ಈ ನಡುವೆ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ 38205http://kannada.oneindia.com/img/2009/07/25-lingappa-cm1.jpg540327assembly byelectionಯೋಗೀಶ್ವರ್ ಹೇಳೋದೆಲ್ಲಾ ಬುರುಡೆ : ಎಚ್ಡಿಕೆ/cj/poornachandra/2009/0807-kumarswamy-campaigns-in-channapattana.htmlಚನ್ನಪಟ್ಟಣ, ಆ. 7 : ಚನ್ನಪಟ್ಟಣದ ಶಾಸಕನಾದಾಗಿನಿಂದ ಸುಳ್ಳಿನ ಕಂತೆ ಕಟ್ಟುತ್ತಿರುವ ಬಿಜೆಪಿ ಅಭ್ಯರ್ಥಿ ಯೋಗೀಶ್ವರ್ ಮತ್ತೆ ಗಿಮಿಕ್‌ಗಳ ಮೂಲಕ ಕ್ಷೇತ್ರದ ಜನತೆಯನ್ನ ವಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸುಳ್ಳಿನ ಸರದಾರ ಯೋಗೀಶ್ವರ್‌ಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಚನ್ನಪಟ್ಟಣ ಕ್ಷೇತ್ರದ ಪುರಾಣ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ 38487http://kannada.oneindia.com/img/2009/08/07-hdk-channapattana1.jpg540327assembly byelectionರಾಮನಗರದಲ್ಲಿ ದೇವೇಗೌಡರ ಬಿರುಸಿನ ಪ್ರಚಾರ/cj/poornachandra/2009/0808-devegowda-sindhya-campaign-in-ramnagar.htmlರಾಮನಗರ, ಆ, 7 : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅನಾರೋಗ್ಯದ ನಡುವೆಯೇ ರಾಮನಗರದ ಜೆಡಿಎಸ್ ಅಭ್ಯರ್ಥಿ ಕೆ.ರಾಜು ಪರ ಪ್ರತಿವಾರ್ಡ್‌ಗಳಿಗೆ ತೆರಳಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.ರಾಜಕೀಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೇರಲು ನಮ್ಮ ಕುಟುಂಬಕ್ಕೆ ರಾಮನಗರದ ಜನತೆ ಸದಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನತೆಯ ಆಶೀರ್ವಾದದಿಂದಲೇ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಆಡಳಿತ ನಡೆಸಲು ಸಾಧ್ಯವಾಯಿತು. ಈ ಬಾರಿಯೂ 38513http://kannada.oneindia.com/img/2009/08/08-sindhya-gowda1.jpg540327assembly byelectionಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು/news/2009/08/12/rural-roads-inflict-back-pain-to-rural-minister.htmlಚಿತ್ತಾಪುರ, ಆ. 12 : ಮಧ್ಯರಾತ್ರಿಯಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳು ರಸ್ತೆಯಲ್ಲಿ ನಿರ್ಭೀತರಾಗಿ ನಡೆದುಹೋಗುವಂತಾಗಬೇಕು. ಆಗಷ್ಟೆ ನಮ್ಮ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ ಎಂಬಂತಹ ಮಾತುಗಳನ್ನು ಪರಮ ಪೂಜನೀಯ ಮಹಾತ್ಮಾ ಗಾಂಧೀಜಿ ಅವರು ಒಮ್ಮೆ ಹೇಳಿದ್ದರು. ಆದರೆ, ನಮ್ಮ ದೇಶದಲ್ಲಿ ದೊಡ್ಡವರ ಮಾತಿಗೆ ಎಳ್ಳಷ್ಟೂ ಬೆಲೆ ಇಲ್ಲ. ಉತ್ತರ ಕರ್ನಾಟಕದ ತುತ್ತತುದಿಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿನೋಡಿ. ಅಲ್ಲಿ ರಾತ್ರಿಹೊತ್ತು 38584http://kannada.oneindia.com/img/2009/08/12-shobha-karandlaje5.jpg158100north karnatakaಗುಲ್‌ಪೀಟ್ ಅಲ್ಲ ಗುಳಪಾಟಿ/recipe/sweet/2007/020707gulapati.htmlಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ. ಪ್ರಸಾದ ನಾಯಿಕ ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್‌ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್‌ಪೀಟ್ 6103http://kannada.oneindia.com/img/2009/08/13-gulapati1.jpg158100north karnatakaಕಂಬಾರರು ನಿದ್ದೆ ಮಾಡ್ತಿದಾರೆ, ನಿಶ್ಯಬ್ದ!/news/2009/02/03/good-for-nothing-legislators-of-karnataka.htmlಗಂಡುಮೆಟ್ಟಿದ ನೆಲದಿಂದ ಪುಟಿದೆದ್ದು ಬಂದ ನಮ್ಮ ಗೌರವಾನ್ವಿತ ಶಾಸಕ ಕಂಬಾರರು ತವರು ಭೂಮಿಯಲ್ಲಿ ನಡೆದ ಅಧಿವೇಶನದಲ್ಲಿ ಸತತವಾಗಿ, ಜನಪದ ಧಾಟಿಯಲ್ಲಿ ನಿದ್ದೆ ಮಾಡಿ ಇತರ ಶಾಸಕರಿಗೆ ಮಾದರಿಯಾದರು. ಹಾಗೆ ನೋಡಿದರೆ, ಜೋಭದ್ರಗೇಡಿತನ ಮತ್ತು ಸೋಮಾರಿತನದ ಪರಮಾವಧಿಯನ್ನು ಚಿತ್ರಿಸುವ ಎದ್ದೇಳು ಮಂಜುನಾಥ ಚಿತ್ರ ಬೆಳಗಾವಿ ಅಧಿವೇಶನಕ್ಕಿಂತ ಎಷ್ಟೋ ವಾಸಿ.* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿಕಳೆದ ಬಾರಿ ಅಂದರೆ 2006ರಲ್ಲಿ ಬೆಳಗಾವಿಯಲ್ಲಿ ನಡೆದ 34434http://kannada.oneindia.com/img/2009/02/03-kambar3.jpg158100north karnatakaಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ/festivals/general/2009/0311-holi-festival-in-north-karnataka.htmlಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.ನಮ್ ಕಾಲದಾಗ 35151http://kannada.oneindia.com/img/2009/03/11-holi2.jpg158100north karnatakaತಿಂಡಿ ಎಂಬ ಪದ ತಂದ ಪೇಚಾಟ/recipe/culture/2009/0401-north-karnataka-food-culture-and-differences.htmlಇಡೀ ಕರ್ನಾಟಕದಲ್ಲಿ ಒಂದೊಂದು ಜಿಲ್ಲೆಯೂ ಭಾಷೆ, ಆಹಾರ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ವಿಭಿನ್ನತೆ ಹೊಂದಿವೆ. ಇಲ್ಲಿನ ವೈವಿಧ್ಯಮಯ ಭಾಷಾ ಸೊಗಡು ಬೇರೆ ಯಾವ ರಾಜ್ಯದಲ್ಲಿಯೂ ಸಿಗಲಾರದು. ಆಹಾರದ ವಿಷಯದಲ್ಲಿಯೂ ಬಳಕೆಯ ಪದಗಳು ವಿಭಿನ್ನವಾಗಿವೆ. ಪ್ರತಿಯೊಂದನ್ನು ಆಸ್ವಾದಿಸುವ ಗುಣ ನಮ್ಮಲ್ಲಿರಬೇಕಷ್ಟೆ. ಬನ್ನಿ ಉತ್ತರ ಕರ್ನಾಟಕದ ಭಾಷಾ ವೈವಿಧ್ಯ ರೆಸಿಪಿಯನ್ನು ಸವಿಯೋಣ.* ಪ್ರಸಾದ ನಾಯಿಕನನ್ನ ಸೋದರ ಮಾವನ ಮಗನಿಗೆ ಆಗತಾನೆ 35660http://kannada.oneindia.com/img/2009/04/01-woman-eating1.jpg158100north karnatakaವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ/news/2009/05/29/shri-siddarudha-math-website-launched-hubli.htmlಹುಬ್ಬಳ್ಳಿ, ಮೇ. 29: ಉತ್ತರಕರ್ನಾಟಕ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠದ ವೆಬ್ ತಾಣವನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತಾನಾಡಿದ ಹೊರಟ್ಟಿ, ಸಿದ್ದಾರೂಢ ಸ್ವಾಮೀಜಿ ಅವರು ಅದ್ವೈತ ತತ್ತ್ವಕ್ಕೆ ಹೊಸ ಆಯಾಮ ನೀಡಿದವರು, ಹಲವು ಜನರ ಕಣ್ತೆರೆಸಿದ ಮಹಾಪುರುಷರು ಶ್ರೀ ಮಠವು ವೆಬ್ ಸೈಟ್ ಆರಂಭಿಸಿರುವುದರಿಂದ ಮಠದ 36978http://kannada.oneindia.com/img/2009/05/29-siddharudha-swamiji1.jpg208257ಶೋಭಾ ಕರಂದ್ಲಾಜೆಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ/movies/headlines/2009/02/09-kannada-film-industry-amrutha-mahotsava.htmlಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 1ರಿಂದ 3ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಅಮೃತ ಘಳಿಗೆಯನ್ನು ಅವಿಸ್ಮರಣೀಯವಾಗಿಸಲು ಕರ್ನಾಟಕ ಸರ್ಕಾರದೊಂದಿಗೆ ಉದಯ ವಾಹಿನಿ ಮತ್ತು ಸನ್ ಫೀಸ್ಟ್ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ಕೆಎಫ್ ಸಿಸಿ ಅಧ್ಯಕ್ಷೆ 34555http://kannada.oneindia.com/img/2009/02/09-jayamala-kfcc1e.jpg208257ಶೋಭಾ ಕರಂದ್ಲಾಜೆಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg208257ಶೋಭಾ ಕರಂದ್ಲಾಜೆಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ /news/2009/05/08/karnataka-cabinet-approves-amendments-to-kcoca-act.htmlಬೆಂಗಳೂರು, ಮೇ. 8 : ಇತ್ತೀಚೆಗೆ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ತರಲು ನಿರ್ಧರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ಒಪ್ಪಿಗೆ ದೊರೆತಿದ್ದು, ಕೋಕಾ ಕಾಯ್ದೆಯನ್ನು ಜಾರಿಗೆ ತರಲು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 36495http://kannada.oneindia.com/img/2009/05/08-shobha-karandlaje1e.jpg208257ಶೋಭಾ ಕರಂದ್ಲಾಜೆಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ /news/2009/06/07/minister-shobha-offers-to-step-down-mysore.htmlಬೆಂಗಳೂರು, ಜೂ. 7 : ಸರಕಾರದೊಳಗೆ ಎದ್ದಿರುವ ಆಂತರಿಕ ಭಿನ್ನಮತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಶೋಭಾ ಅವರ ಮಾತನ್ನು ನಿರಾಕರಿಸಿದ್ದು, ಶೋಭಾ ಅವರನ್ನೇ ಮುಂದುವರೆಸಿ ಶಾಸಕ ಎಸ್ ರಾಮದಾಸ್ ಸಿಎಂ 37176http://kannada.oneindia.com/img/2009/06/07-shobha-karandlaje3e.jpg208257ಶೋಭಾ ಕರಂದ್ಲಾಜೆಮೈಸೂರಲ್ಲಿ ಗಂಡಸರಿಲ್ವೆ ವಿಶ್ವನಾಥ್ ಪ್ರಶ್ನೆ/news/2009/06/08/vishwanath-slams-mysuru-incharge-minister.htmlಮೈಸೂರು, ಜೂ. 8 : ಮೈಸೂರಿನ ಆಡಳಿತ ನಡೆಸಲು ಗಂಡಸರು ಯಾರೂ ಇಲ್ವಾ ? ಹೀಗೆ ರಾಜ್ಯ ಸರಕಾರಕ್ಕೆ ಖಾರವಾಗಿ ಪ್ರಶ್ನಿಸಿದವರು ಮೈಸೂರು ಸಂಸದ ಎಚ್ ವಿಶ್ವನಾಥ್ ಅವರು. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಪ್ಪ ಸಾಕು ಅನ್ನಿಸಿದೆ. ಮೇಡಂ ಬೇಡ ಅಂದರೆ ಸಿಎಂ ಇರಲೇಬೇಕು ಎನ್ನುತ್ತಿದ್ದಾರೆ. ಏಕೆ ಮೈಸೂರಿನಲ್ಲಿ ಆಡಳಿತ ನಡೆಸುವ 37181http://kannada.oneindia.com/img/2009/06/08-vishwanath-h2.jpgnews"> ಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು | Shobha Karandlaje | Rural Roads | Gulbarga Dist | Karnataka Minister | Back ache - ಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು - Kannada Oneindia

ಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು

Rural roads inflict back pain to Rural minister
ಚಿತ್ತಾಪುರ, ಆ. 12 : ಮಧ್ಯರಾತ್ರಿಯಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳು ರಸ್ತೆಯಲ್ಲಿ ನಿರ್ಭೀತರಾಗಿ ನಡೆದುಹೋಗುವಂತಾಗಬೇಕು. ಆಗಷ್ಟೆ ನಮ್ಮ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ ಎಂಬಂತಹ ಮಾತುಗಳನ್ನು ಪರಮ ಪೂಜನೀಯ ಮಹಾತ್ಮಾ ಗಾಂಧೀಜಿ ಅವರು ಒಮ್ಮೆ ಹೇಳಿದ್ದರು. ಆದರೆ, ನಮ್ಮ ದೇಶದಲ್ಲಿ ದೊಡ್ಡವರ ಮಾತಿಗೆ ಎಳ್ಳಷ್ಟೂ ಬೆಲೆ ಇಲ್ಲ. ಉತ್ತರ ಕರ್ನಾಟಕದ ತುತ್ತತುದಿಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿನೋಡಿ. ಅಲ್ಲಿ ರಾತ್ರಿಹೊತ್ತು ಇರಲಿ, ಹಗಲು ಹೊತ್ತು ನಡೆಯುವುದೂ ದುರ್ಭರವಾಗಿದೆ. ನಡೆಯುವುದು ಬೇಡಾರೀ, ಅತ್ಯುತ್ತಮ ಶಾಕ್ ಅಬ್ ಸಾರ್ಬರ್ ಹೊಂದಿರುವ ಐಶಾರಾಮಿ ಕಾರಿನಲ್ಲಿ ತಿರುಗಾಡುವುದೂ ತುಂಬಾ ತ್ರಾಸ ಆಗಿದೆ ಎಂದರೆ ಏನರ್ಥ? ಅನರ್ಥ ಅನರ್ಥ.

ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯ ಮರೀಚಿಕೆ ಆಗಿರುವುದು ಆ ಜಿಲ್ಲೆಗಳಿಗೆ ಯಾವತ್ತೂ ಕಾಲಿಡದವರಿಗೂ ಗೊತ್ತು. ಈ ಪ್ರಾಂತ್ಯಗಳಲ್ಲಿ ಹಂದಿ ಮರಿ ಹಾಕುವ ರೀತಿಯಲ್ಲಿ ಎಂಟು ಹತ್ತು ಸಲ ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಿ ಅಧಿಕಾರ ಹಿಡಿದರೂ ಸ್ವಂತ ತಾಲೂಕುಗಳನ್ನು ಉದ್ಧಾರ ಮಾಡದ ಆಪಾದನೆ ಹೊತ್ತುಕೊಂಡು ಕರಟಕ ಮತ್ತು ದಮನಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರಾಜಿನಾಮೆ ಕೊಡಬೇಕು ಎಂದು ದಟ್ಸ್ ಕನ್ನಡ ಆಗ್ರಹಿಸುತ್ತದೆ.

ಯಾಕೆಂದರೆ, ರಾಜ್ಯ ಸಂಪುಟದಲ್ಲಿರುವ ಏಕಮೇವ ಮಹಿಳಾ ಮಂತ್ರಿ ಶೋಭಾ ಕರಂದ್ಲಾಜೆ ಶ್ರಾವಣ ಮಂಗಳವಾರ ಚಿತ್ತಾಪುರ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಹೋಗಿ ಪಡಬಾರದ ಪಾಡು ಅನುಭವಿಸಿದ್ದಾರೆ. ಅವರು ಅನುಭವಿಸಿದ ಯಾತನೆ ಚಿತ್ತಾಪುರ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಲೆದವರಿಗೆ ಮಾತ್ರ ಗೊತ್ತಾಗುತ್ತದೆ. ಈ ಊರಿನ ಕಚಡ ರಸ್ತೆಗಳಲ್ಲಿ ಸುತ್ತಾಡಿ ನನಗೆ ಅಪಾರ ಬೆನ್ನು ನೋವು ಬಂದಿದೆ ಎಂದು ಶೋಭಾ ಅತೀವ ಬೇಜಾರುಪಟ್ಟುಕೊಂಡು ಮಾತನಾಡಿದ್ದಾರೆ.

ಕಳೆದ ಸುಮಾರು ಒಂದೇ ಒಂದು ವರ್ಷದಿಂದ ನಮ್ಮ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಪಕ್ಷಗಳು ಏನನ್ನು ಸಾಧಿಸಿವೆ? ಎಂದು ಅವರು ಚಿತ್ತಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗುಡುಗಿದ್ದಾರೆ. ಇಲ್ಲಿಯ ರಸ್ತೆಗಳನ್ನು ನೋಡಿದರೆ ನಿಮಗೆ ತಿಳಿಯುವುದಿಲ್ಲವೇ, ಇಲ್ಲಿನ ರಸ್ತೆಗಳಲ್ಲಿ ಚುನಾವಣ ಪ್ರಚಾರ ಸಭೆಗೆ ಓಡಾಡಿ ನನ್ನ ಬೆನ್ನು ಬಿದ್ದು ಹೋಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅಂದಿನ ನಾಯಕರನ್ನು ಇಂದಿನ ವಿರೋಧ ಪಕ್ಷವನ್ನು ಏಕಕಾಲಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮದು ರೈತರ ಮತ್ತು ಅಭಿವೃದ್ದಿ ಪರ ಸರಕಾರ. ವಿರೋಧ ಪಕ್ಷಗಳ ಮಾತಿಗೆ ಮೂರುಕಾಸು ಬೆಲೆ ಕೊಡಬೇಡಿ. ಈ ಕ್ಷೇತ್ರಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ನಮ್ಮ ಸರಕಾರ ಕಟಿಬದ್ದವಾಗಿದೆ ಎಂದು ಬೆನ್ನು ನೋವಿನಿಂದ ಬಳಲುತ್ತಿದ್ದರೂ ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಕರಂದ್ಲಾಜೆ ಭರವಸೆ ಕೊಟ್ಟಿದ್ದಾರೆ. ಅವರ ಬೆನ್ನು ನೋವು ಮತ್ತು ಭಾರತದಲ್ಲಿ ಹಾವಳಿಗೆ ಇಟ್ಟುಕೊಂಡಿರುವ ಹಂದಿಜ್ವರ ಬೇಗ ಇಳಿಮುಖವಾಗಲೆಂದು ಇದೇ ಸಂದರ್ಭದಲ್ಲಿ ದಟ್ಸ್ ಕನ್ನಡ ಆಶಿಸುತ್ತದೆ.

ಇದೀಗ ತಾನೆ ನಮ್ಮ ವಾಹಿನಿಯನ್ನು ತಲುಪಿದ ಸುದ್ದಿಯ ಪ್ರಕಾರ ಬರುವ ಸೆಪ್ಟೆಂಬರ್ ಮಾಹೆಯಲ್ಲಿ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಮಾನ್ಯ ಮುಮಂ ಯಡ್ಡಿ ಅವರು ತಿಳಿಸಿದ್ದಾರೆ. ಅಷ್ಟು ಹೊತ್ತಿಗಾದರೂ ಬೆನ್ನು ನೋವು ಕಡಿಮೆ ಆದರೆ ಶೋಭಾ ಸಂಪುಟ ಸಭೆಯಲ್ಲಿ ಭಾಗವಹಿಸಿ, ಲವಲವಿಕೆಯಿಂದ ರಾಜ್ಯಭಾರ ಮಾಡುವಂತಹ ಪರಿಸ್ಥಿತಿ ಉದ್ಭವ ಆಗತ್ತೆ. ಹಾಗಾಗಲಿ. ಅಕಸ್ಮಾತ್ ಭಿನ್ನಮತೀಯ ಬಿಜೆಪಿ ಶಾಸಕರ ಒತ್ತಾಯಕ್ಕೆ ಯಡಿಯೂರಪ್ಪ ಮಣಿದು ಶೋಭಾ ಅವರಿಗೆ ರಜೆ ಕೊಟ್ಟರೆ ಬಲವಂತ ವಿಶ್ರಾಂತಿಯಿಂದ ನೋವು ನೀಗುತ್ತದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+