ದೇಶಾದ್ಯಂತ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ
ನವದೆಹಲಿ,
ಆ. 5 : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಆಗಸ್ಟ್ 6 ರಿಂದ ಎರಡು ದಿನ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಗುರುವಾರ ಮತ್ತು ಶುಕ್ರವಾರ ದೇಶಾದ್ಯಂತ ಬ್ಯಾಂಕಿಂಗ್ ಸೇವೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ. id="toptextpromo">ಬ್ಯಾಂಕ್
ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕ್ ಗಳ ಸಂಘ(ಐಬಿಎ) ಮಧ್ಯೆ ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಭೆ ವಿಫಲವಾಗಿದ್ದರಿಂದ ನೌಕರ ಸಂಘಟನೆಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ವೇತನ ಹೆಚ್ಚಳದ ಪ್ರಮಾಣವನ್ನು ಐಬಿಎ ಪ್ರಸ್ತಾವಿತ ಶೇ. 17.5 ರಿಂದ ಶೇ. 13ಕ್ಕೆ ಕಡಿತಗೊಳಿಸಿರುವುದು ಮತ್ತು ಪಿಂಚಣಿ ನೀಡಿಕೆ, ಸೇವೆಯಲ್ಲಿರುವಾಗಲೇ ಮರಣ ಹೊಂದುವ ಸಿಬ್ಬಂದಿ ಅವಲಂಬಿತರಿಗೆ ಅನುಕಂಪದ ನೆಲೆಯಲ್ಲಿ ಕೆಲಸ ನೀಡುವ ಬೇಡಿಕೆ ತಿರಸ್ಕರಿಸಿರುವುದು ಮುಷ್ಕರಕ್ಕೆ ಕಾರಣವಾಗಿದೆ. ಮುಷ್ಕರದಲ್ಲಿ 60 ಸಾವಿರ ಶಾಖೆಗಳು 10 ಲಕ್ಷ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications