ಲಂಚ ಪ್ರಕರಣ : ಬೂಟಾ ಸಿಂಗ್ ಮಗ ಬಂಧನ
ಮುಂಬೈ, ಜು. 31 : ಪರಿಶಿಷ್ಟ ಜಾತಿ ಜನಾಂಗದ ರಾಷ್ಟ್ರೀಯ ಆಯೋಗದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿಹಾಕಲು ನಾಸಿಕ್ ಮೂಲದ ಗುತ್ತಿಗೆದಾರರಿಂದ ಒಂದು ಕೋಟಿ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್ ಅವರ ಮಗ ಸರಬ್ ಜೋತ್ ಸಿಂಗ್ ಅಲಿಯಾಸ್ ಸ್ವೀಟಿ ಸಿಂಗ್ ಅವರನ್ನು ಸಿಬಿಐ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಸರಬ್ ಜೋತ್ ಸಿಂಗ್ ಅವರನ್ನು ದೆಹಲಿಯಲ್ಲಿ ಬಂಧಿಸಿರುವ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ತನಿಖೆಗಾಗಿ ಕರೆತಂದಿದ್ದಾರೆ. ಪರಿಶಿಷ್ಟ ಜಾತಿ ಜನಾಂಗದ ರಾಷ್ಟ್ರೀಯ ಆಯೋಗದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ತಮ್ಮ ತಂದೆ ಆಯೋಗದ ಅಧ್ಯಕ್ಷರಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಿಸುವ ಭರವಸೆ ನೀಡಿ ಸರಬ್ ಜೋತ್ ಸಿಂಗ್ ಒಂದು ಕೋಟಿ ರುಪಾಯಿ ಲಂಚ ಕೇಳಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.
(ಏಜನ್ಸೀಸ್)












Click it and Unblock the Notifications