ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ ಪ್ರವೇಶ : ಶಿರಮಳ್ಳಿಮಠದ ಶ್ರೀಗಳು ನಿಧನ

By Staff
|
Google Oneindia Kannada News

Najangud seer
ನಂಜನಗೂಡು, ಜು. 23 : ತಾಲ್ಲೂಕಿನ ಶಿರಮಳ್ಳಿಯ ಮುರುಘ ವಿರಕ್ತ ಮಠದ ಬಸವರಾಜೇಂದ್ರ ಸ್ವಾಮೀಜಿ ಬುಧವಾರ ಸ್ವಯಂ ಅಗ್ನಿಪ್ರವೇಶ ಮಾಡಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಬುಧವಾರ ನಸುಕಿನಲ್ಲಿ ಶಿರಮಳ್ಳಿಯ ಹೊರವಲಯದ ಮಠದ ಬಾಗಿಲಿನಲ್ಲಿ ರಾಶಿ ಹಾಕಿರುವ ಜೋಳದ ತೆನೆ ಬಿಡಿಸಿದ ದಿಂಡಿನ ರಾಶಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಸ್ವಾಮಿಗಳು ತಮ್ಮ ಆರಾಧ್ಯದೈವ ಅತ್ಮಲಿಂಗವನ್ನು ಬಲಗೈ ಮುಷ್ಠಿಯೊಳಗೆ ಹಿಡಿದು ಅಗ್ನಿಗೆ ಆಹುತಿಯಾದರು ಎನ್ನಲಾಗಿದೆ. 82 ವರ್ಷದ ಬಸವರಾಜೇಂದ್ರ ಸ್ವಾಮೀಜಿ 1954 ರಲ್ಲಿ ಶಿರಮಳ್ಳಿ ಬಂದು ನೆಲೆಸಿ 1956 ರಿಂದ ಈ ವರೆಗೆ ಈ ಮಠದ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ರೀಗಳು ಮೂಲತಃ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲ್ಲೂಕಿನ ನೆಲ್ಲಿಕಟ್ಟೆ ಗ್ರಾಮದ ಶಿಕ್ಷಕ ವೀರಯ್ಯ ನಾಲ್ಕನೇ ಮಗನಾಗಿದ್ದಾರೆ.

1994 ರಲ್ಲಿ ಈ ಮಠಕ್ಕೆ ಕಿರಿಯ ಸ್ವಾಮೀಜಿಯಾಗಿ ನೇಮಕವಾದ ಬಸವರಾಜೇಂದ್ರ ಶ್ರೀಗಳು ಹಿರಿಯ ಶ್ರೀಗಳೊಂದಿಗೆ ಸಾಮರಸ್ಯ ಉಂಟಾಗದ ಕಾರಣ ಬಸವರಾಜೇಂದ್ರ ಸ್ವಾಮೀಜಿಗಳು ಮೈಸೂರು ಹಾಗೂ ಗುಂಡ್ಲುಪೇಟೆಯ ಮಾದಾಪುರ ಮಠದಲ್ಲಿ ವಾಸ್ಯವ್ಯ ಹೂಡಿದ್ದರು. ಘಟನೆಗೆ ಮಠದ ಭಕ್ತಾಧಿಗಳು, ಅನೇಕ ಸ್ವಾಮೀಜಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸುಟ್ಟು ಕರಕಲಾಗಿದ್ದ ಸ್ವಾಮೀಜಿಗಳ ದೇಹವನ್ನು ಮಠದ ಆವರಣದಲ್ಲಿ ಶವಸಂಸ್ಕಾರ ಮಾಡಲಾಯಿತು. ಸ್ವಾಮೀಜಿಗಳ ಈ ನಿರ್ಧಾರಕ್ಕೆ ಕಾರಣಗಳು ಏನು ಎಂಬುದು ತಿಳಿದು ಬಂದಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X