ಪಿಎಂ, ಎಚ್ಎಂ ದಮ್ಮಿದ್ರೆ ರಾಂಚಿ ಬನ್ನಿ : ಸಿಪಿಐಎಂ
ರಾಂಚಿ, ಜು. 21 : ಇತ್ತೀಚೆಗೆ ಕೇಂದ್ರ ಸರಕಾರ ಸಿಪಿಎಂ (ಮಾವೋವಾದಿ) ಸಂಘಟನೆಯನ್ನು ಭಯೋತ್ಪಾದನೆ ಸಂಘಟನೆಗಳ ಪಟ್ಟಿಯಸ್ಸಿ ಸೇರಿಸಿರುವ ಬೆನ್ನಲ್ಲೇ ಮಾವೋವಾದಿಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ ಚಿದಂಬರಂ ಅವರಿಗೆ ಬೆದರಿಕೆ ಹಾಕಿವೆ. ಜಾರ್ಖಂಡ್ ಗೆ ಭೇಟಿ ನೀಡಿದರೆ ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜೀವಬೆದರಿಕೆಯೊಡ್ಡಿವೆ.
ಸಿಪಿಐಎಂ ಸಂಘಟನೆಯನ್ನು ಉಗ್ರರ ಪಟ್ಟಿಯಲ್ಲಿ ಸೇರಿಸಿದ ಸಂದರ್ಭದಲ್ಲಿ ಗೃಹ ಸಚಿವ ಪಿ ಚಿದಂಬರಂ ಅವರು ಇನ್ನು ದೇಶದಲ್ಲಿ ಮಾವೋವಾದಿಗಳ ಅಟ್ಟಹಾಸ ಕೊನೆಗೊಂಡಿತು ಎಂದು ಹೇಳಿದ್ದಾರೆ. ಈ ಹೇಳಿಕೆ ಸರಕಾರದ ತಿರುಕನ ಕನಸು, ಮಾವೋವಾದಿಗಳನ್ನು ಹತ್ತಿಕ್ಕಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಚಿದಂಬರಂ ಅವರಿಗೆ ಧೈರ್ಯವಿದ್ದರೆ ರಾಂಚಿಗೆ ಭೇಟಿ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಎಲ್ ಟಿಟಿಇ ಸಂಘಟನೆ ಹೇಗೆ ಅತ್ಮಾಹುತಿ ಬಾಂಬರ್ ಮೂಲಕ ಹತ್ಯೆಗೈಯಿತಲ್ಲ. ಅದೇ ಮಾದರಿಯಲ್ಲಿ ಸಿಪಿಐಎಂ ಸಂಘಟನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರದಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವರನ್ನು ಹತ್ಯೆ ಮಾಡುತ್ತೇನೆ ಎಂದು ಜಾರ್ಖಂಡ್ ರಾಜ್ಯ ಕೇಂದ್ರೀಯ ಮಾವೋವಾದಿಗಳ ಸಂಘಟನೆಯ ಸದಸ್ಯ ಅನೂಪ್ ಜಿ ಎಂಬುವವರು ತಿಳಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications