ಎಫ್ಎಂ ಚಾನಲ್ ಆಗ್ರಹಿಸಿ ಸಾಹಸಿಗರ ದೋಣಿಯಾನ

ಎಫ್ಎಂ ಚಾನಲ್ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಾಹಸ ಅಕಾಡೆಮಿ ಸದ್ಯದಲ್ಲಿಯೇ ಮನವಿ ಸಲ್ಲಿಸಲಿದೆ.
ಶಿವಮೊಗ್ಗದ ಬೈಪಾಸ್ ಸೇತುವೆ ಬಳಿಯಿಂದ ಸಾಗಿ ಸುಮಾರು 25 ಕಿ.ಮೀ. ದೂರದಲ್ಲಿರುವ ಕೂಡಲಿವರೆಗೂ ಬೋಟಿನಲ್ಲಿ ಸಾಗಿದರು. ಸಾಹಸ ಅಕಾಡೆಮಿಯ ಸದಸ್ಯರೊಡನೆ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ, ಮುರುಗನ್, ಅಮರೀಶ್, ಎಎನ್ ವಿಜಯೇಂದ್ರ, ಶ್ರೀನಾಥ್ ನಗರಗದ್ದೆ, ವಾದಿರಾಜ್, ಗಿರೀಶ್ ಮತ್ತು ಕೆಲ ಪುಟಾಣಿಗಳೂ ಸಹ ಈ ಯಾನದಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷರಾದ ಎನ್ ಜೆ ರಾಜಶೇಖರ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಎಫ್ಎಂ ರೇಡಿಯೋ ಚಾನಲ್ ಮತ್ತು ಪರಿಸರ ಉಳಿವಿಗಾಗಿಯೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಈ ಅಭಿಯಾನವನ್ನು ಕೈಗೊಳ್ಳಲಾಗಿತ್ತು.












Click it and Unblock the Notifications