ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ

By Staff
|
Google Oneindia Kannada News

Karnataka Assembly Polls 2009
ಬೆಂಗಳೂರು, ಜು.19:ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ಆಗಸ್ಟ್ 18ರಂದು ಮತದಾನ ನಡೆಯಲಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಪಿಜಿಆರ್ ಸಿಂಧ್ಯಾ, ಎಂ ಶಿವಣ್ಣ, ಪ್ರಿಯಾಂಕ್ ಖರ್ಗೆ ಕಣಕ್ಕಿಳಿಯಳಿರುವ ಪ್ರಮುಖರಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ (ಪ.ಜಾ. ಮೀಸಲು), ಬಿಬಿಎಂಪಿ ದಕ್ಷಿಣ ವಿಭಾಗದ ಗೋವಿಂದರಾಜನಗರ, ರಾಮನಗರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ (ಪ.ಜಾ. ಮೀಸಲು) ಕ್ಷೇತ್ರಗಳಿಗೆ ಚುನಾವಣೆ ಘೋಷಿಸಲಾಗಿದ್ದು, ವೇಳಾಪಟ್ಟಿ ಹೀಗಿದೆ:

ಜುಲೈ 22ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ. ಜುಲೈ30ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸು ಪಡೆಯಲು ಆಗಸ್ಟ್ 1 ಕೊನೆಯ ದಿನ. ಆಗಸ್ಟ್ ೧೮ರಂದು ಮತದಾನ ನಡೆಯಲಿದ್ದು, 21ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಆಗಸ್ಟ್ 23 ರಂದು ಕೊನೆಗೊಳ್ಳಲಿದೆ. ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಉಪ ಚುನಾವಣೆಗಳು ನಡೆಯುವ ಜಿಲ್ಲೆಗಳಿಗೆ ಮಾತ್ರ ನೀತಿ ಸಂಹಿತೆ ಅನ್ವಯಿಸುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ ಅವರು ತಿಳಿಸಿದರು.

ಈ ಉಪ ಚುನಾವಣೆಗಳಲ್ಲಿ ದಿನಾಂಕ 1-1-2009 ರಂದು ಅರ್ಹತಾ ದಿನಾಂಕವೆಂದು ಪರಿಗಣಿಸಿ ತಯಾರಿಸಲಾದ ಮತದಾರರ ಪಟ್ಟಿಗಳನ್ನು ಬಳಸಲಾಗುವುದು. ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರ ವಿವರ ಹೀಗಿದೆ:
ಚಿತ್ತಾಪುರ- 1,81,233;
ಗೋವಿಂದರಾಜನಗರ- 2,70,840;
ರಾಮನಗರ- 1,76,153;
ಚನ್ನಪಟ್ಟಣ- 1,86,078;
ಕೊಳ್ಳೇಗಾಲ-1,82,927.

ಮತಗಟ್ಟೆಗಳು: ಚಿತ್ತಾಪುರ ಕ್ಷೇತ್ರದಲ್ಲಿ 200 ಮತಗಟ್ಟೆಗಳಿದ್ದು, ಗೋವಿಂದರಾಜನಗರದಲ್ಲಿ 215, ರಾಮನಗರದಲ್ಲಿ 251, ಚನ್ನಪಟ್ಟಣ 277 ಹಾಗೂ ಕೊಳ್ಳೇಗಾಲದಲ್ಲಿ 197 ಮತಗಟ್ಟೆಗಳಿವೆ. ಈ ಉಪಚುನಾವಣೆಗೆ ಒಟ್ಟು 6000 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ಸಿ.ಎಸ್. ಸುರಂಜನ ವಿವರಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X