ನೆರೆ ಹಾವಳಿಗೀಡಾದ ಪ್ರದೇಶಗಳಿಗೆ ಈಶ್ವರಪ್ಪ ಭೇಟಿ

ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಮಂಡಗದ್ದೆ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿವೆ. ಶಿವಮೊಗ್ಗ ನಗರದಲ್ಲಿ ಕೂಡ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಇಮಾಮ್ ಬಾಡಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಮನೆಮಠ ಕಳೆದುಕೊಂಡ ಜನರನ್ನು ಸಂತೈಸಿದರು. ಅವರಿಗೆ ಶೀಘ್ರವೇ ವಸತಿ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.
ನಗರದ ಇಮಾಮ್ ಬಾಡಾ, ಕುಂಬಾರಗುಂಡಿ, ಬಿ.ಬಿ.ರಸ್ತೆ, ಕೋಟೆ ರಸ್ತೆ ಹಿಂಭಾಗ, ಸೀಗೆಹಟ್ಟಿಯ ಸುತ್ತಲಿನ ಭಾಗಗಳು ಮತ್ತು ಮಲ್ಲೇಶ್ವರನಗರ ಸೇರಿದಂತೆ ಕೆಲವು ಬಡಾವಣೆಗಳು ನೀರಿನಿಂದ ಆವೃತವಾಗಿವೆ. ಶಿವಮೊಗ್ಗ ಸಮೀಪದ ಗೋಪಿಶೆಟ್ಟಿ ಕೊಪ್ಪದ ಕೆರೆ ಕೋರಿ ಒಡೆದಿದ್ದು ಸುತ್ತಲಿನ ತೋಟ, ಗದ್ದೆ ನುಗ್ಗಿ ಬೆಳೆಗಳಿಗೆ ಅಪಾರ ಹಾನಿಯುಂಟು ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications