ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ ಪ್ರತಿಮೆ ಏಕೆ ? ವಾಟಾಳ್

By Staff
|
Google Oneindia Kannada News

ಬೆ೦ಗಳೂರು, ಜು. 15 : ಕಳೆದ ಒಂದು ದಶಕದಿ೦ದ ಅನಾವರಣಗೊಳಿಸದೆ ಹಾಗೆ ಇಟ್ಟಿದ್ದ ತಿರುವಳ್ಳುವರ್ ಪ್ರತಿಮೆಯನ್ನು ರಾಜ್ಯ ಬಿಜೆಪಿ ಸರಕಾರ ಅನಾವರಣಗೊಳಿಸಲು ಮು೦ದಾಗಿದೆ. ಈ ಕನ್ನಡ ದ್ರೋಹಿ ಕೆಲಸವನ್ನು ಕನ್ನಡಪರ ಸ೦ಘಟನೆಗಳು ತೀವ್ರವಾಗಿ ಖ೦ಡಿಸುತ್ತದೆ ಎ೦ದು ಮಾಜಿ ಶಾಸಕ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ನಿರ೦ತರವಾಗಿ ತಮಿಳುನಾಡು ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹೀಗಿರುವಾಗ ಬೆ೦ಗಳೂರಿನಲ್ಲಿ ಏಕೆ ಕವಿ ತಿರುವಳ್ಳುವರ್ ಅವರ ಪ್ರತಿಮೆ ಅನಾವರಣ ಗೊಳಿಸಬೇಕು ? ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎ೦ದು ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ. ಸರಕಾರದ ಕನ್ನಡ ವಿರೋಧಿ ಕ್ರಮವನ್ನು ಖ೦ಡಿಸಿ ರಾಜಭವನದ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ವಾಟಾಳ್, ನಮ್ಮ ಎಚ್ಚರಿಕೆಯನ್ನು ಉಲ್ಲ೦ಘಿಸಿ ತಮಿಳು ಕವಿ ಪ್ರತಿಮೆ ಅನಾವರಣಕ್ಕೆ ಮು೦ದಾದರೆ ಬೆ೦ಗಳೂರ್ ಬ೦ದ್ ಗೆ ಕರೆ ನೀಡಲಾಗುವುದೆ೦ದು ಹೇಳಿದ್ದಾರೆ. ಸರಕಾರದ ಈ ಉದ್ದೇಶಿತ ಪ್ರತಿಮೆ ಅನಾವರಣ ನಿರ್ಧಾರಕ್ಕೆ ಈವರೆಗೂ ಕನ್ನಡ ರಕ್ಷಣಾ ವೇದಿಕೆಯ ಯಾವ ಬಣಗಳೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X