ಹೂಳೆತ್ತುವ ಕಾರ್ಯಕ್ಕೆ ನೂತನ ತಾಂತ್ರಿಕತೆ ಬಳಕೆ
ಬೆಂಗಳೂರು, ಜು. 14 : ರಾಜ್ಯದಲ್ಲಿ ಒಟ್ಟು 63 ಜಲಾಶಯಗಳಿದ್ದು ಅವುಗಳ ಹೂಳೆತ್ತುವ ಕಾರ್ಯ ಈವರೆಗೆ ಮಾಡಿಲ್ಲದ ಕಾರಣ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿವರವಾದ ಅಧ್ಯಯನಮಾಡಿ ಪ್ರತಿಯೊಂದು ಜಲಾಶಯದಲ್ಲಿರುವ ಹೂಳಿನ ಪ್ರಮಾಣವನ್ನು ಅಂದಾಜು ಮಾಡಿ ಆಧುನಿಕ ತಾಂತ್ರಿಕತೆಯನ್ನು ಬಳಸಿ ಮಾಡಲಾಗುತ್ತದೆ. ಧೂಪಧಾಳ ಜಲಾಶಯದಲ್ಲಿ ಪ್ರಾಯೋಗಿಕವಾಗಿ ನೂತನ ತಾಂತ್ರಿಕತೆ ಬಳಸಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಆಲಮಟ್ಟಿ 5 ಟಿ.ಎಂ.ಸಿ, ತುಂಗಭದ್ರಾ 28.1 ಟಿಎಂಸಿ, ಮಲಪ್ರಭಾ 2.2 ಟಿಎಂಸಿ, ಭದ್ರಾ 1 ಟಿಎಂಸಿ, ಹಾರಂಗಿ 5.5 ಟಿಎಂಸಿ, ಹೇಮಾವತಿ 2.5 ಟಿಎಂಸಿ ಕ್ಷಮತೆಯನ್ನು ಕಳೆದುಕೊಂಡಿವೆ. ಇಟೆಲಿ, ಯುರೋಪ್ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಹೈಡ್ರೋಲಿಕ್ ವಿಧಾನವನ್ನು ಇದಕ್ಕಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications