464365evmವಿದ್ಯುನ್ಮಾನ ಮತಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು?/news/2009/04/06/information-about-electronic-voting-machine.html15ನೇ ಲೋಕಸಭೆ ಚುನಾವಣೆಯಲ್ಲಿ ಏಪ್ರಿಲ್ 23ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ದಿನಗಣನೆ ಪ್ರಾರಂಭವಾಗಿದೆ. ಮೊತ್ತಮೊದಲ ಬಾರಿಗೆ ಮತದಾನ ಮಾಡುವವರಿಗೆ, ತಿಳಿವಳಿಕೆ ಇಲ್ಲದವರಿಗೆ ಇಲ್ಲಿದೆ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ ಅಥವಾ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸಂಪೂರ್ಣ ಮಾಹಿತಿ. ಮತಚಲಾವಣೆ ಮುನ್ನ ಮತಯಂತ್ರದ ಬಗ್ಗೆ ತಿಳಿದುಕೊಳ್ಳಿ.* ಜಿ.ಚಂದ್ರಕಾಂತ, ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗುಲಬರ್ಗಾಭಾರತವು ವಿಶ್ವದ ಅತಿ 35751http://kannada.oneindia.com/img/2009/04/06-electronic-voting1.jpg464365evmಎಲೆಕ್ಟ್ರಾನಿಕ್ ಮತಯಂತ್ರ ನಿಷೇಧಿಸಿ : ಅಡ್ವಾಣಿ/news/2009/07/05/advani-wants-ballot-papers-back.htmlನವದೆಹಲಿ, ಜು. 5 : ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ಚುನಾವಣೆಗಳ ಹೊತ್ತಿಗೆ ಅವುಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೇಂದ್ರ ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ ಗಳನ್ನು ಮತ್ತೆ ಮರುಜಾರಿಗೊಳಿಸಬೇಕು. ಇದೇ ವರ್ಷ ಮಹಾರಾಷ್ಟ್ರ ಸೇರಿ ಮೂರು ವಿಧಾನಸಭೆ ರಾಜ್ಯಗಳ 37787http://kannada.oneindia.com/img/2009/07/05-advani.jpg464365evmಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು/news/2009/07/12/losers-second-advanis-shun-evm-call.htmlಮತಯಂತ್ರಗಳಲ್ಲಿ ಮೋಸ ಮಾಡಲು ಸಾಧ್ಯ. ಇದರಿಂದ ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಮುಂದಿನ ಚುನಾವಣೆಗಳನ್ನು ನಡೆಸಬೇಕು ಎಂದು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ ರಾಜಕಾರಣಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು. ಇನ್ನೇನು ಪ್ರಧಾನಿ ಆಗೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿದ್ದ ಅಡ್ವಾಣಿ ಅವರಿಗೆ ದೇಶದ ಮತದಾರರ ಕೈಹಿಡಿಯಲಿಲ್ಲ. ಅವರ ಕನಸು ಕನಸಾಗಿಯೇ ಉಳಿಯಿತು. 37934http://kannada.oneindia.com/img/2009/07/12-naveen-chawla1.jpg464365evmಇವಿಎಂಗಳಿಂದ ಮೋಸ ,ಬಿಜೆಪಿ ಕ್ಯಾತೆ /news/2009/10/22/cong-leads-in-assembly-polls-bjp-blames-evms.htmlನವದೆಹಲಿ, ಅ. 22 : ಕುಣಿಯಲು ಬಾರದೆ ನೆಲ ಡೊಂಕು ಎನ್ನುವ ಗಾದೆಯ ಹಾಗೆ ವರ್ತಿಸುತ್ತಿರುವ ಬಿಜೆಪಿ ಇಂದಿನ ಚುನಾವಣೆ ಮೂರು ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ಮತ್ತೆ ಹಳೆಯ ರಾಗ ಹಾಡತೊಡಗಿದೆ. ಎಲೆಕ್ಟ್ರಾನಿಕ್ ಮತಯಂತ್ರ ಮೂಲಕ ಅವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ. ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಪರ ಹೊರಬೀಳುತ್ತಿದ್ದಂತೆಯೇ ಮಾಧ್ಯಮ 39796http://kannada.oneindia.com/img/2009/10/22-mukhtar-abbas-naqvi1.jpg108752lk advaniಸಿಎಂ ಜತೆ ಅಡ್ವಾಣಿ ಭೇಟಿ ಮಾಡಿದ ಸೋಮಣ್ಣ /news/2009/01/06/congress-mla-v-somanna-meets-advani-with-cm.htmlಬೆಂಗಳೂರು, ಜ. 6 : ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ನಡೆಸುವುದಿಲ್ಲ, ಇನ್ನೇನಿದ್ದರೂ ಅಭಿವೃದ್ಧಿ, ಅಭಿವೃದ್ಧಿ ಹಾಗೂ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಕಳೆದ ಉಪಚುನಾವಣೆ ಫಲಿತಾಂಶದ ನಂತರ ಹೇಳಿಕೆ ನೀಡಿದ್ದರು. ಆದರೆ ಮಂಗಳವಾರ ನವದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ಯಡಿಯೂರಪ್ಪ ಜೊತೆಗೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ 33914http://kannada.oneindia.com/img/2009/01/06-somanna-advani-bsy.jpg108752lk advaniಮಂಗಳೂರು ಪಬ್ ದಾಳಿ ಖಂಡನೀಯ:ಅಡ್ವಾಣಿ /news/2009/02/28/mangaluru-pub-attack-unpardonable-advani.htmlಬೆಂಗಳೂರು, ಫೆ. 28 : ಹಿಂದೂ ಧರ್ಮ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಸಹಿಸುವುದಿಲ್ಲ. ಮಂಗಳೂರಿನಲ್ಲಿ ಪಬ್ ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಭಯೋತ್ಪಾದನಾ ವಿರೋಧಿ ಅಭಿಯಾನದ ಸಮಾರೋಪ 34921http://kannada.oneindia.com/img/2009/02/28-advani-lk2.jpg108752lk advaniರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು/news/2009/03/13/arun-jaitley-skips-bjp-election-meeting.htmlನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ 35198http://kannada.oneindia.com/img/2009/03/13-arun-jaitley2.jpg108752lk advaniಯಡಿಯೂರಪ್ಪ ನಮ್ಮ ಕ್ಯಾಪ್ಟನ್, ಅನಂತಕುಮಾರ್/news/2009/03/17/ananth-kumar-buries-the-hatchet-sings-cm-praise.htmlಬೆಂಗಳೂರು, ಮಾ. 17 : ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನಗೊಂಡು ಭಿನ್ನಾರಾಗ ಹಾಡಿದ್ದ ಸಂಸದ ಅನಂತಕುಮಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಪರಸ್ಪರ ಹೊಗಳಿಕೆಗೆ ಇಳಿದಿದ್ದು, ರಾಜ್ಯ ಬಿಜೆಪಿಯಲ್ಲಿ ನಾವಿಬ್ಬರೂ ಹಕ್ಕ ಬುಕ್ಕರು ಎಂಬುದನ್ನು ಸಾಬೀತುಪಡಿಸಿದರು. ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅನಂತಕುಮಾರ್, ತಮ್ಮ ಭಾಷಣದುದ್ದಕ್ಕೂ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಹೊಗಳಿದರು. ಯಡಿಯೂರಪ್ಪ 35271http://kannada.oneindia.com/img/2009/03/17-ananthkumar2.jpg108752lk advaniಹೆಣ್ಣುಮಕ್ಕಳು'ಲಕ್ಷಾಧಿಪತಿ'ಆಗ್ಬೇಕು : ಆಡ್ವಾಣಿ/news/2009/03/18/advani-vows-to-make-every-girl-a-lakhpati.htmlನವದೆಹಲಿ, ಮಾ. 18 : ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ಹೊಸ ಆಶ್ವಾಸನೆ ನೀಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಹುಡುಗಿಗೆ 18 ವರ್ಷ ತುಂಬುವ ವೇಳೆ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ. ದೇಶದಲ್ಲಿ ಸುಮಾರು 714 ಮಿಲಿಯನ್ ಮತದಾರರಲ್ಲಿ 340 ಮಿಲಿಯನ್ ಮಹಿಳಾ ಮತದಾರರಿದ್ದಾರೆ.ದೇಶದ 35307http://kannada.oneindia.com/img/2009/03/18-advanilk2.jpg156366mrutyunjaya kalmatಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg156366mrutyunjaya kalmatಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg156366mrutyunjaya kalmatರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg156366mrutyunjaya kalmatಲೋಕಸಭೆ: ಕರ್ನಾಟಕದಲ್ಲಿ ಗೆಲ್ಲುವ ಕುದುರೆಗಳು /news/2009/04/05/ls-election-who-will-win-in-karnataka.htmlಲೋಕಸಭೆ ಮತದಾನದ ದಿನಾಂಕಗಳು ಸನ್ನಿಹಿತವಾಗತೊಡಗಿವೆ. ರಾಜ್ಯದ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ವೈದ್ಯರು, ಉದ್ಯಮಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ಹೇಳಿಕೊಳ್ಳವ ಮಟ್ಟಿಗಾದರೂ ಹುರಿಯಾಳು ಆಗಿದ್ದಾರೆ. ಇದರ ಜೊತೆಗೆ ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ಸಿನ ಕೆಲ ಅತ್ಯಂತ ಹಿರಿಯ ರಾಜಕಾರಣಿಗಳು ಬಿಜೆಪಿ ಮೂಲಕ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.*ಮೃತ್ಯುಂಜಯ ಕಲ್ಮಠ 35740http://kannada.oneindia.com/img/2009/04/05-bjp-logo2.jpg156366mrutyunjaya kalmatಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpgnews"> ಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು | EVM | LK Advani | Mrutyunjaya Kalmat | Omesh Saigal | Naveen Chawla | CEC | ಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು - Kannada Oneindia

ಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು

Naveen Chawla
ಮತಯಂತ್ರಗಳಲ್ಲಿ ಮೋಸ ಮಾಡಲು ಸಾಧ್ಯ. ಇದರಿಂದ ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಮುಂದಿನ ಚುನಾವಣೆಗಳನ್ನು ನಡೆಸಬೇಕು ಎಂದು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ ರಾಜಕಾರಣಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು. ಇನ್ನೇನು ಪ್ರಧಾನಿ ಆಗೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿದ್ದ ಅಡ್ವಾಣಿ ಅವರಿಗೆ ದೇಶದ ಮತದಾರರ ಕೈಹಿಡಿಯಲಿಲ್ಲ. ಅವರ ಕನಸು ಕನಸಾಗಿಯೇ ಉಳಿಯಿತು. ಹತಾಶೆಗೊಂಡಿರುವ ಅವರು ಏನೇನೂ ಮಾತನಾಡುತ್ತಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಅಡ್ವಾಣಿ ಅವರಂಥ ಮೇರು ರಾಜಕೀಯ ನಾಯಕ ಇಂತಹ ಕೆಳಮಟ್ಟದ ರಾಜಕೀಯಕ್ಕೆ ಇಳಿಯಬಾರದು ಬಿಡಿ. ಭಾರತವನ್ನು ಮತ್ತೆ ಶಿಲಾಯುಗಕ್ಕೆ ತಳ್ಳುತ್ತಿದ್ದಾರೆ ಅಂದುಕೊಂಡವರೂ ಸಾಕಷ್ಟು ಜನ.

*ಮೃತ್ಯುಂಜಯ ಕಲ್ಮಠ

ಆದರೆ ದಿನ ಕಳೆದಂತೆ ಅಡ್ವಾಣಿ ಅವರು ಎತ್ತಿರುವ ಪ್ರಶ್ನೆ ನಿಜವಾಗತೊಡಗಿದೆ. ದೆಹಲಿ ಸರಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಓಮೇಶ್ ಸೈಗಾಲ್ ಅವರು ಸದ್ಯ ಚಾಲ್ತಿಯಲ್ಲಿರುವ ಮತಯಂತ್ರಗಳ ಮೂಲಕ ಮೋಸ ಮಾಡಬಹುದು. ನಿರ್ದಿಷ್ಟ ವ್ಯಕ್ತಿಗೆ ಎಲ್ಲ ಮತಗಳು ಸೇರ್ಪಡೆಗೊಳಿಸುವ ಸಾಫ್ಟವೇರ್ ನ್ನು ಅಳವಡಿಸಲು ಸಾಧ್ಯ ಎಂದು ಕೇಂದ್ರ ಮುಖ್ಯ ಚುನಾವಣೆ ಅಧಿಕಾರಿ ನವೀನ ಚಾವ್ಲಾ ಅವರ ಮುಂದೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.
ಇದರಿಂದ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದಾಯಿತು. ಹಾಗಾದರೆ, ಕಳೆದ ಚುನಾವಣೆಯಲ್ಲಿ ಇಂತಹ ನಕಲಿ ಸಾಫ್ಟವೇರ್ ಬಳಸಲಾಗಿತ್ತೆ ? ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿತಲ್ಲ. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಜಯಭೇರಿ ಬಾರಿಸಿತೇ ? ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಮುಂದೆ ಉಳಿದ ಪಕ್ಷಗಳು ಧೂಳಿಪಟವಾದವಲ್ಲ. ಇದಕ್ಕೇನು ಕಾರಣ ಇರಬಹುದು ? ಎನ್ನುವ ಪ್ರಶ್ನೆಗಳು ಏಳುವುದು ಸಹಜ.

ಮತಯಂತ್ರಗಳಲ್ಲಿ ಮೋಸ ಮಾಡಬಹುದು ಎನ್ನುವ ಅಂಶಕ್ಕೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೂ ಸಂಬಂಧವಿಲ್ಲ. ನನ್ನ ಕಳಕಳಿ ಏನೆಂದರೆ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದಾದರೆ, ಮುಂದಿನ ಚುನಾವಣೆ ಅದರ ಬಳಕೆ ಬೇಡ. ಈಗಾಗಲೇ ಅಭಿವೃದ್ಧಿ ಹೊಂದಿದ ಕೆಲ ದೇಶಗಳಲ್ಲಿ ಮತಯಂತ್ರಗಳ ಮೂಲಕ ಚುನಾವಣೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ. ಅಡ್ವಾಣಿ ಮಾತಿಗೆ ಸಹಮತ ವ್ಯಕ್ತಪಡಿಸಿದವರು ಎಡಪಕ್ಷದ ಮುಖಂಡ ಸೀತಾರಾಂ ಯೆಚೂರಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ರಾಂ ವಿಲಾಸ್ ಪಾಸ್ವಾನ್ ಅವರು ಮತಯಂತ್ರ ನಿಷೇಧಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಯುಪಿಎ ಸರಕಾರದ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಕೂಡಾ ಮತಯಂತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ಭಾರತ್ ಎಲೆಕ್ಟ್ರಾನಿಕ್ ಲಿ.ಮತ್ತು ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಗಳು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು 1998ರಲ್ಲೇ ಸಿದ್ದಪಡಿಸಿದ್ದವು. ಆದರೆ, ಪತ್ರಿಕೆಯೊಂದರ ವರದಿಯ ಆಧಾರದ ಮೇಲೆ ಮಾಜಿ ಪ್ರಧಾನಿ ವಿ ಪಿ ಸಿಂಗ್ ಮತಯಂತ್ರಗಳ ವಿರುದ್ಧ ಗಟ್ಟಿಯಾಗಿ ಮಾತನಾಡಿದ್ದರಿಂದ ಇವುಗಳ ಜಾರಿ ನೆನೆಗುದಿಗೆ ಬಿದ್ದಿತು. ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳು ಗೌಡಾನ್ ನಲ್ಲಿ ನೂತನ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಧೂಳು ತಿನ್ನತೊಡಗಿದವು.

ಆದರೆ, ತಂತ್ರಜ್ಞರು ಸುಮ್ಮನೇ ಕೂರಲಿಲ್ಲ. ವಿನೂತನ ತಂತ್ರಜ್ಞಾನ ಹೊಂದಿದೆ ಮತಯಂತ್ರಗಳಿಂದ ಮೋಸ ಮಾಡಲು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗಕ್ಕೆ ಮನದಟ್ಟು ಮಾಡಿಕೊಟ್ಟರು. 2004ರಲ್ಲಿ ದೇಶಾದ್ಯಂತ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಚುನಾವಣೆಗಳು ನಡೆದವು. ಈವರೆಗೊ ಎಲ್ಲಿಯೂ ಇದರ ಬಗ್ಗೆ ದೂರು ಬಂದಿರಲಿಲ್ಲ. ಆದರೆ ನಿವೃತ್ತ ಐಎಎಸ್ ಅಧಿಕಾರಿ ಸೈಗಾಲ್ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಹಿನ್ನೆಲೆಯಲ್ಲಿ ನೂರೆಂಟು ಪ್ರಶ್ನೆಗಳು ಉದ್ಭವಿಸಿವೆ.

ಮತಯಂತ್ರಗಳಿಗೆ ಸಾಫ್ಟ್ ವೇರ್ ಜೋಡಣೆ ಹಾಗೂ ಅದನ್ನು ಸೀಲ್ ಮಾಡುವ ಕೆಲಸ ಸರಕಾರಿ ಸಂಸ್ಥೆಗಳಾದ ಬಿಇಎಲ್ ಮತ್ತು ಇಐಸಿಎಲ್ ಸ್ವಂತವಾಗಿ ಮಾಡದೇ ಅದನ್ನು ಗುತ್ತಿಗೆ ನೀಡಲಾಗಿತ್ತು ಎಂದು ಸೈಗಾಲ್ ವಿವರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 10 ಸಾವಿರ ಅಂತರದಿಂದ ಫಲಿತಾಂಶ ಪ್ರಕಟವಾಗಿರುವ ಕಡೆಗಳೆಲ್ಲ ತನಿಖೆ ನಡೆಸಬೇಕು ಎಂದಿದ್ದಾರೆ. ಸೈಗಾಲ್ ಅವರ ನೀಡಿರುವ ಸಲಹೆ ಗಂಭೀರವಾಗಿದ್ದರೂ, ಪ್ರಕಟಗೊಂಡಿರುವ ಫಲಿತಾಂಶಗಳ ತನಿಖೆ ತುಸು ಕಷ್ಟವೇ. ಈಗ ಬಂದಿರುವ ಫಲಿತಾಂಶಗಳ ತನಿಖೆ ಕೈಬಿಟ್ಟು ಮುಂದೆ ಆಗುವ ಅನಾಹುತವನ್ನು ಕೊನೆಗೊಳಿಸುವ ಯತ್ನ ಮಾಡಬೇಕಿದೆ. ಮೊದಲು ಸರಕಾರಿ ಕಂಪನಿಗಳು ಗುತ್ತಿಗೆ ನೀಡಿದ್ದ ಗುತ್ತಿಗೆದಾರರ ಬಳಿ ಇರುವ ದಾಖಲೆಗಳನ್ನು ಆಯೋಗ ವಶಪಡಿಸಿಕೊಳ್ಳಬೇಕಾಗುತ್ತದೆ. ಆನಂತರ ಬೇಕಿದ್ದರೆ ತನಿಖೆ ಮಾಡುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+