ಪಿಎಂ ನೇತೃತ್ವದ ಜಾಗತಿಕ ಮಟ್ಟದ ಸಲಹಾ ಸಮಿತಿ

ಕೇಂದ್ರ ಸರಕಾರ ರಚಿಸುತ್ತಿರುವ ಉನ್ನತ ಮಟ್ಟದ ಜಾಗತಿಕ ಮಟ್ಟದ ಸಲಹಾ ಸಮಿತಿಯಲ್ಲಿ ಒಟ್ಟು 23 ಖ್ಯಾತನಾಮರಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಷ್ಕೃತ ಡಾ ಅಮಾರ್ತ್ಯ ಸೇನ್, ಉಕ್ಕು ಉದ್ಯಮಿ ಎಲ್ ಎನ್ ಮಿತ್ತಲ್, ಪೆಪ್ಸಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಿ ಇಂದಿರಾ ನೂಯಿ, ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ, ಸಿಟಿ ಗ್ರೂಫ್ ನ ಮುಖ್ಯಸ್ಥ ವಿಕ್ರಮ್ ಪಂಡಿತ್, ಎನ್ ಆರ್ ಐ ಉದ್ಯಮಿ ಕರಣ್ ಬಿಲಿಮೋರಿಯಾ, ಅರ್ಥಶಾಸ್ತ್ರಜ್ಞ ಜಗದೀಶ್ ಬಾಗ್ವತ್, ಶಿಕ್ಷಣ ತಜ್ಞ ಶ್ಯಾಮ್ ಪಿತ್ರೋಡಾ ಸಮಿತಿಯಲ್ಲಿರುವ ಪ್ರಮುಖರಾಗಿದ್ದಾರೆ.
ವಿದೇಶಗಳೊಂದಿಗೆ ಬಾಂಧವ್ಯ ಬೆಸೆಯಲು ಈ ಸಮಿತಿ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ಆಶಾಭಾವನೆಯನ್ನು ಕೇಂದ್ರದ ಸಂಸದೀಯ ಖಾತೆಗಳ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications