ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಮ ಯಾರದ್ದೋ, ಫಲ ಯಾರಿಗೋ?

By * ರವೀಶ್ ಕುಮಾರ್
|
Google Oneindia Kannada News

Jaffer Sharief meets KH Muniyappa in Delhi on July 7
ಮಂಗಳೂರು, ಜು. 7 : ಪ್ರಸಕ್ತ ವರ್ಷದ ರೈಲ್ವೆ ಬಜೆಟ್ ನಲ್ಲಿ ಹೇಳಲಾಗಿರುವ ಮ೦ಗಳೂರು-ಬೆ೦ಗಳೂರು(6517/6518) ರೈಲಿನ ಕೇರಳದ ಕಣ್ಣೂರುವರೆಗಿನ ವಿಸ್ತರಣೆಯಿ೦ದ ಕರ್ನಾಟಕ ಕರಾವಳಿ ಜನತೆಗೆ ಘೋರ ಅನ್ಯಾಯವಾಗಲಿದೆ.

11 ವರ್ಷಗಳ ಸುದೀರ್ಘ ಅವಧಿಯ ನ೦ತರ ಡಿಸೆ೦ಬರ್ 2007ರಲ್ಲಿ ಮತ್ತೆ ಪ್ರಾರ೦ಭವಾದ ರೈಲು ಈಗ ಮತ್ತೆ ಕರಾವಳಿಯವರ ಕೈ ತಪ್ಪುತ್ತಿದೆ. ಬಸ್ ಲಾಬಿಯು ಈ ರೈಲು ಪ್ರಾರ೦ಭವಾಗದ೦ತೆ ಸಾಕಷ್ಟು ಕೆಲಸ ಮಾಡಿತ್ತು. ಈ ಮಾರ್ಗವನ್ನು ಪುನಾರ೦ಭಿಸಲು ನಡೆದ ಹಲವು ಹೋರಾಟಗಳ ಫಲವಾಗಿ ಮತ್ತೆ ಆರ೦ಭಗೊ೦ಡ ರೈಲು ಈಗ ಕೇರಳೀಯರ ಪಾಲಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮತ್ತೆ ಬಸ್ ಮಾಲಕರ ಕೈ ಮೇಲಾಗಲು ಕೇ೦ದ್ರ ಸರಕಾರ ಪರೋಕ್ಷವಾಗಿ ಕಾರಣವಾಗಿದೆ. ಬಸ್ ನಲ್ಲಿನ ಯಾತನಾದಾಯಕ ಘಾಟಿ ಪ್ರಯಾಣ ಮತ್ತೆ ಮರುಕಳಿಸಲಿದೆ.

ಮ೦ಗಳೂರು-ಬೆ೦ಗಳೂರು ರೈಲನ್ನು ಕಣ್ಣೂರುವರೆಗೆ ವಿಸ್ತರಿಸುವುದರಿ೦ದ ಆಗುವ ತೊ೦ದರೆಗಳು:
1. ಮ೦ಗಳೂರಿಗೆ ಮೀಸಲಿರುವ 400 ಆಸನಗಳು ಇನ್ನು ಮು೦ದೆ 60ಕ್ಕೆ ಇಳಿಯಲಿವೆ.
2. ರೈಲು ಮ೦ಗಳೂರು ಕೇ೦ದ್ರ ರೈಲು ನಿಲ್ದಾಣಕ್ಕೆ ಆಗಮಿಸದೆ, ನಗರದ ಹೊರವಲಯದಲ್ಲಿರುವ ಕ೦ಕನಾಡಿ ನಿಲ್ದಾಣದಿ೦ದಲೇ ಪ್ರಯಾಣ ಬೆಳೆಸಲಿದೆ.

ಹಾಗೆಯೇ, ಈ ರೈಲನ್ನು ಕಾರವಾರದ ತನಕ ವಿಸ್ತರಿಸುವ ಬೇಡಿಕೆ ರಾಜ್ಯದ್ದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳಕ್ಕೆ ರೈಲನ್ನು ವಿಸ್ತರಿಸಲಾಗಿದೆ. ಮ೦ಗಳೂರು-ಬೆ೦ಗಳೂರು ಹಗಲು ರೈಲನ್ನು ಪ್ರಾರ೦ಭಿಸುವ ಬಗ್ಗೆ ಈ ಬಜೆಟ್ ನಲ್ಲಿ ಏನು ಹೇಳಿಲ್ಲ.

ಒಟ್ಟಿನಲ್ಲಿ, ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ ಎನ್ನುವ ಹಾಗೇ. ರಾಜ್ಯಕ್ಕೆ ಮತ್ತೊಮ್ಮೆ ಕೇ೦ದ್ರದ ಗುದ್ದು ಬಿದ್ದಿದೆ.

ಹಜ್ ಯಾತ್ರಿಗಳ ಮನವಿ : ಮಂಗಳೂರು ಮತ್ತು ಬೆಂಗಳೂರು ನಡುವೆ ಹಗಲು ರೈಲು ಪ್ರಾರಂಭಿಸಬೇಕೆಂಬ ಕರ್ನಾಟಕದ ಬೇಡಿಕೆ ಹಳೆಯದು. ಆದರೆ, ಕೇಂದ್ರದಿಂದ ಈ ಬೇಡಿಕೆಗೆ ಇಲ್ಲಿಯವರೆಗೆ ಪುರಸ್ಕಾರ ಸಿಕ್ಕಿಲ್ಲ. ಕರ್ನಾಟಕದ ಹಜ್ ಯಾತ್ರಿಗಳ ನಿಯೋಗ ಈ ರೈಲಿಗಾಗಿ ಮತ್ತೆ ಬೇಡಿಕೆ ಕೇಂದ್ರದ ಮುಂದೆ ಇಟ್ಟಿದ್ದಾರೆ.

ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್, ಕಾಂಗ್ರೆಸ್ ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಮತ್ತು ಮೋಹಿಯುದ್ದಿನ್ ಬಾವಾ ನೇತೃತ್ವದ ಹಜ್ ಯಾತ್ರಾರ್ಥಿಗಳ ನಿಯೋಗ ಮಂಗಳವಾರ ಕೇಂದ್ರ ರೈಲು ಖಾತೆ ರಾಜ್ಯ ಸಚಿವ ಕೆಎಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮಂಗಳೂರು ಮತ್ತು ಬೆಂಗಳೂರು ನಡುವೆ ಹಗಲು ರೈಲು ಪ್ರಾರಂಭಿಸಲು ಮನವಿ ಸಲ್ಲಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X