ಮಲೆನಾಡ ಮಡಿಲಲ್ಲಿ ಮಿನಿ ವಿಧಾನಸೌಧ

ಕಟ್ಟಡ ಸುಮಾರು 35 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದು, ಅಂದಾಜು ವೆಚ್ಚ ಮೊದಲೇ ನಿಗದಿಯಂತೆ ಸುಮಾರು 5.49 ಕೋಟಿ ರೂ. ತಗುಲಲಿದೆ. ಕಟ್ಟಡದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಹಾಗೆಯೇ, ಕಟ್ಟಡದ ಕಾಮಗಾರಿಯು 2007ರ ಡಿಸೆಂಬರ್‌ನಲ್ಲಿ ಪ್ರಾರಂಭಗೊಂಡು, ಇದೇ ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.
ಮಿನಿ ವಿಧಾನಸೌಧ ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಕೋಟೆ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಹಸಿಲ್ದಾರ್‌ರವರ ಕಚೇರಿ ಜೊತೆಗೆ ಜಿಲ್ಲಾಧಿಕಾರಿಯವರ ಕಚೇರಿಯೂ ಇದೇ ಸೌಧಕ್ಕೆ ಸ್ಥಳಾಂತಗೊಳ್ಳಲಿದೆ. ಜೊತೆಗೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಉಪಯೋಗ ಪಡೆಯಬಹುದಾಗಿದೆ.
ಸೌಧದಲ್ಲಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಲಿವೆ. ಡಿಯುಡಿಸಿ ಇಲಾಖೆ, ಡಿಡಿಎಲ್‌ಆರ್ ಇಲಾಖೆ ಹಾಗೂ ಇವಿಎಮ್ ಮತ್ತು ಸ್ಟೋರೇಜ್ ಇರುತ್ತವೆ. ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಮತ್ತು ಎಚ್‌ಕ್ಯು ಕಚೇರಿ ಇರಲಿವೆ. ಹಾಗೆಯೇ ಎರಡನೇ ಮಹಡಿಯಲ್ಲಿ ರೆವೆನ್ಯು ಹೆಡ್ ಅಕೌಂಟೆಂಟ್ ಕಚೇರಿ, ಲೆಕ್ಕ ಪರಿಶೋಧಕರ ಕಚೇರಿ, ಆರ್‌ಎಚ್‌ಎಮ್ ಇಲಾಖೆ ಹಾಗೂ ಗಣಕಯಂತ್ರ ವಿಭಾಗ ಮತ್ತು ಭೂಮಿ ಇಲಾಖೆ ಕಾರ್ಯ ನಿರ್ವಹಿಸಲಿವೆ.
ಸೌಧ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರಿನ ಜಂಪಾನ ಕನ್ ಸ್ಟ್ರಕ್ಟರ್ ಪ್ರೈ.ಲಿ. ವಹಿಸಿಕೊಂಡಿದೆ. ಕಂಪನಿಯ ಇಂಜಿನಿಯರ್‌ಗಳಾದ ಪ್ರವೀಣ್ ವರ್ಮ, ಸೋಮಶೇಖರ್ ಮತ್ತು ಎ.ಜಿ.ಎಂ. ನಾರಾಯಣ್ ರಾವ್ ಕಟ್ಟಡ ನಿರ್ಮಾಣದ ಜವಾಬ್ಧಾರಿ ವಹಿಸಿದ್ದಾರೆ. ಸೌಧದ ವಿನ್ಯಾಸವನ್ನು ಸುಜಾತ ಅಂಗಡಿ ರೂಪಿಸಿದ್ದಾರೆ.
ಪರಿಸರ ಪ್ರೇಮಿಗಳ ವಿರೋಧ : ಸೌಧವೇನೋ ನಗರದಲ್ಲಿ ಅದ್ಭುತವಾಗಿ ರೂಪುಗೊಳ್ಳುತ್ತಿದ್ದು ಸಧ್ಯದಲ್ಲಿಯೇ ಅದರ ಉದ್ಘಾಟನೆಯು ನೆರವೇರಲಿದೆ. ಆದರೆ, ಸಮಸ್ಯೆಯೇನೆಂದರೆ ಸೌಧದ ಮುಂಭಾಗದಲ್ಲಿರುವ ಮರಗಳು. ಇಂಜಿನಿಯರ್‌ಗಳು ಹೇಳುವಂತೆ ಮರಗಳ ಬೇರುಗಳಿಂದ ಕಟ್ಟಡದ ಅಡಿಪಾಯಕ್ಕೆ ಮತ್ತು ಕಟ್ಟಡದ ಬಾಹ್ಯ ಸೌಂದರ್ಯಕ್ಕೆ ಹಾನಿಯಾಗುತ್ತದೆಂಬುದು ಅವರ ಅಭಿಪ್ರಾಯ. ಆದರೆ, ಆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು ಅನುಮತಿ ನೀಡಿಲ್ಲ. ಜೊತೆಗೆ ಪರಿಸರ ಪ್ರೇಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ: ಕೆ.ಆರ್. ಸೋಮನಾಥ್












Click it and Unblock the Notifications