ಮುಂಗಾರು ಕ್ಷೀಣ : ಹವಾಮಾನ ಇಲಾಖೆ
ಬೆಂಗಳೂರು, ಜೂ. 30 : ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಎಂದು ಕೇಂದ್ರ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಳಹವೆ ಮುಂದುವರೆದಿದೆ. ಮುಂಗಾರು ಮಳೆ ಪ್ರಮಾಣ ತಂಬಾ ಕಡಿಮೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಪ್ರದೇಶ ಮತ್ತು ಕೆಲ ಕಡೆ ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದೆ. ಕಾರವಾರ, ಆಗುಂಬೆಯಲ್ಲಿ 4 ಸೆಂಮೀ, ಪಣಂಬೂರು, ಬಜ್ಪೆ, ಬಂಟ್ವಾಳ, ಮಾಣಿ, ಧರ್ಮಸ್ಥಳ, ಕೊಟ್ಟಿಗೆಹಾರ, ಮಂಗಳೂರು, ಮೂಲ್ಕಿ, ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ 2 ಸೆಂ ಮೀ ಮಳೆ ಆಗಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಡುಪಿ, ಕೋಟಾ, ಕಾರ್ಕಳ, ಕುಂದಾಪುರ, ಶಿರಸಿ, ಹೊನ್ನಾವರ, ಭಟ್ಕಳ, ಕುಮಟಾ, ಅಂಕೋಲಾ ಮತ್ತು ಮಂಚೇಕೇರಿ, ನರಗುಂದ, ನಾಪೋಕ್ಲು, ಮದಾಪೂರ ಹಾಗೂ ಕಡೂರಿನಲ್ಲಿ 1 ಸೆಂ ಮೀ ಮಳೆ ಬಿದ್ದಿದೆ.
ಹವಾಮಾನ ಇಲಾಖೆ ಪ್ರಕಾರ, ಕರಾವಳಿಯ ಕೆಲವಡೆ ಗುರುವಾರದವರೆಗೊ ಒಣಹವೆ ಮತ್ತು ತಂಪಾದ ಗಾಳಿ ಕಡಿಮೆ ಪ್ರಮಾಣದಲ್ಲಿ ಮಳ ಬೀಳುವ ಲಕ್ಷಣಗಳಿವೆ. ಉತ್ತರ ಕರ್ನಾಟರದ ಕೆಲ ಕಡೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಘಾಟ್ ಪ್ರದೇಶಗಳಲ್ಲಿ ಮಳೆ ಬೀಳಬಹುದು. ಬೆಂಗಳೂರಿನಲ್ಲಿ ರಾತ್ರಿ ಹೊತ್ತು ತಂಪಾದ ಗಾಳಿ ಹಾಗೂ ಮಳೆ ಬೀಳುವ ಸಾಧ್ಯತೆ ಇದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications