ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2008ರ ಗಲಭೆ ಪ್ರಕರಣ: ರಾಜ್ ಠಾಕ್ರೆಗೆ ಜಾಮೀನು

By Staff
|
Google Oneindia Kannada News

Raj thackeray
ಮುಂಬೈ, ಜೂ. 29: ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು 1 ಲಕ್ಷ ರು ಪಾವತಿಸಿ 2008 ರ ಗಲಭೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.ಇಂದು ಬೆಳಗ್ಗೆ ಕಲ್ಯಾಣ್ ನ ಕೋರ್ಟ್ ನಲ್ಲಿ ಶರಣಾಗಿ, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು.

2008 ರಲ್ಲಿ ರಾಜ್ ಠಾಕ್ರೆ ನೇತೃತ್ವದ ಎಂಇಎಸ್ ಕಾರ್ಯಕರ್ತರು ರೈಲ್ವೇಪರೀಕ್ಷೆ ಬರೆಯಲು ಬಂದಿದ್ದ ಬಿಹಾರ್ ಹಾಗೂ ಉತ್ತರಪ್ರದೇಶದ ಅಭ್ಯರ್ಥಿಗಳ ಮೇಲೆ ಹಲ್ಲೆ, ದಾಂಧಲೆ ನಡೆಸಿದ್ದರು. ಸ್ಥಳೀಯ ಮರಾಠಿಗರಿಗೆ ರೈಲ್ವೇ ನೇಮಕಾತಿಯಲ್ಲಿ ಅನ್ಯಾಯ ಆಗುತ್ತಿದ್ದು, ಉತ್ತರ ಭಾರತ ಮೂಲದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಠಾಕ್ರೆ ಕಿಡಿಕಾರಿದ್ದರು. ಈ ಘಟನೆ ಸಂಬಂಧ ಸುಮಾರು 54 ಕೇಸುಗಳನ್ನು ಠಾಕ್ರೆ ಹಾಗೂ ಅವರ ಸಹಚರರ ಮೇಲೆ ಹಾಕಲಾಗಿತ್ತು. ಜೂ. 16 ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.

ಜಾಮೀನು ನೀಡದಂತೆ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಮುಂಚೆ ಕೆಳ ನ್ಯಾಯಾಲಯದಿಂದ ಠಾಕ್ರೆ ಪಡೆದಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ, ಕೋರ್ಟ್ ಗೆ ಶರಣಾಗುವಂತೆ ಹೈಕೋರ್ಟ್ ಆದೇಶ ನೀಡಿತು.ಎಂ ಇಎಸ್ ಕಾರ್ಯಕರ್ತರ ದಂಡು ಹೈಕೋರ್ಟ್ ಆವರಣದಲ್ಲಿ ಜಮಾಯಿಸಿದ್ದು, ಪೊಲೀಸ್ ಕಸ್ಟಡಿಗೆ ಠಾಕ್ರೆ ಅವರನ್ನು ಒಪ್ಪಿಸದಿರುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಠಾಕ್ರೆ ಪರ ವಕೀಲ ಸಯಜ್ಜಿ ನಾಂಗ್ರೆ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X