495804monsoonಮುಂದಿನ ಎರಡು ದಿನ ರಾಜ್ಯದಲ್ಲಿ ಭಾರಿ ಮಳೆ ಸಂಭವ/news/2009/05/18/weather-forecast-heavy-rain-in-karnataka.htmlಬೆಂಗಳೂರು, ಮೇ 18 : ಕಳೆದೆರಡು ದಿನಗಳಿಂದ ಹುಯ್ಯುತ್ತಿರುವ ಮಳೆಗೆ ಬೆಂಗಳೂರಿನ ಚರಂಡಿಗಳು, ಅಗಿದ ರಸ್ತೆಗಳು, ರಸ್ತೆ ತಗ್ಗುಗಳು ತುಂಬಿ ತುಳುಕಾಡುತ್ತಿವೆ. ಜೋರು ಗಾಳಿ, ಬರೀ ಆರ್ಭಟದಿಂದ ಕೂಡಿ ಮಳೆಗೆ ರಾಜಧಾನಿಯ ಜನತೆ ಮೈಯೊಡ್ಡಿದ್ದಾರೆ.ಆಗಿದ್ದು ಬರೀ 16 ಮಿ.ಮೀ. ಮಳೆ. ಇಷ್ಟಕ್ಕೇ ರಸ್ತೆಗಳು ರಸ್ತೆಗೆ ಹರಿದುಬಂದ ಚರಂಡಿ ನೀರಿನಲ್ಲಿ ತೇಲಾಡುತ್ತಿದ್ದಂತೆ ಭಾಸವಾಗುತ್ತಿದೆ. ಗರಿಷ್ಠ ತಾಪಮಾನ 35ರಿಂದ 33 36736http://kannada.oneindia.com/img/2009/05/18-weather-forecast1.jpg495804monsoonಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು/cj/vinayak-patagar/2009/0526-huriyakki-ladu-coastal-karnataka-recipe.htmlಕರಾವಳಿ ವಿಶೇಷ ತಿಂಡಿ ತಿನಸುಗಳಲ್ಲಿ ಹುರಿಯಕ್ಕಿ ಲಾಡು ಒಂದು. ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯಕವಾಗಿ ಪ್ರಮುಖ ಆಹಾರವಾಗಿ ಉಳಿದುಕೊಂಡಿರುವ ಕುಚ್ಚಿಗೆ ಅಕ್ಕಿಯಿಂದ ಮತ್ತು ತೆಳುವಾದ ಜೋನಿ ಬೆಲ್ಲದಿಂದ ತಯಾರಿಸಲ್ಪಡುವ ಲಾಡು ಇಂದಿನ ಥಳಕು ಬಳುಕಿನ ನಾಜೂಕಿನ ಬೇಕರಿ ತಿಂಡಿಗಳ ಭರಾಟೆಗಳ ಮಧ್ಯೆ ಅಪರೂಪವಾಗುತ್ತಿದೆ.* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ 36902http://kannada.oneindia.com/img/2009/05/26-huriyakki-ladu1.jpg495804monsoonಮತ್ತೆ ಮಳೆ ಹುಯ್ಯುತ್ತಿದೆ, ಎಲ್ಲ ನೆನಪಾಗುತ್ತಿದೆ.../column/manikanth/2009/0608-sweet-memories-of-monsoon.htmlಮಳೆಗಾಲ ಶುರುವಾಗಿದೆ! ಮಳೆ'ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ 37193http://kannada.oneindia.com/img/2009/06/08-children-rain1.jpg495804monsoonಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ/news/2009/06/24/draught-centre-calls-for-emergency-meeting.htmlನವದೆಹಲಿ, ಜೂ. 24 : ದೇಶದಾದ್ಯಂತ ಬರದ ಭೀಕರ ಛಾಯೆ ಮೂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದ್ಯುತ್, ಕೃಷಿ ಕಾರ್ಯದರ್ಶಿ, ನೀರಾವರಿ ಸಚಿವ ಮತ್ತು ಹವಾಮಾನ ಇಲಾಖೆಯ ತುರ್ತು ಸಭೆಯನ್ನು ಶ್ರಮ ಶಕ್ತಿ ಭವನದಲ್ಲಿ ಬುಧವಾರ ಕರೆದಿತ್ತು.ದೇಶದ ಬಹುತೇಕ ರಾಜ್ಯಗಳಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಾಸರಿಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಸಾಲದೆಂಬಂತೆ ದಕ್ಷಿಣ ಮತ್ತು 37560http://kannada.oneindia.com/img/2009/06/24-draught1.jpg495804monsoonಲಿಂಗನಮಕ್ಕಿಯಲ್ಲಿ ಬರ... ಅರ್ಧ ಕರ್ನಾಟಕ ಕತ್ತಲಲ್ಲಿ?/cj/pasha/2009/0630-monsoon-failure-linganamakki-dam-empty.htmlಶಿವಮೊಗ್ಗ, ಜೂ.30 : ಭಾರತದ ಹತ್ತು ಪ್ರಮುಖ ಅಣೆಕಟ್ಟುಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟು ಅರ್ಧ ಕರ್ನಾಟಕಕ್ಕೆ ಬೆಳಕು ನೀಡುವ ಅಣೆಕಟ್ಟು ಎಂದೇ ಕರೆಯಲ್ಪಡುತ್ತದೆ. ಆದರೆ, ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಅಣೆಕಟ್ಟು ನೀರಿಲ್ಲದೇ ಬಡಕಲಾಗಿದೆ.ಶರಾವತಿ ನದಿಗೆ ಕರ್ನಾಟಕ ಸರ್ಕಾರ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಅಣೆಕಟ್ಟಿನ ವಿಸ್ತಾರ 2.4 37676http://kannada.oneindia.com/img/2009/06/30-linganamakki1.jpg36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ | Draught | Monsoon | Rain shortage | El Nino | Yeddyurappa - ಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ - Kannada Oneindia

ಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ

Draught, center calls for emergency meeting
ನವದೆಹಲಿ, ಜೂ. 24 : ದೇಶದಾದ್ಯಂತ ಬರದ ಭೀಕರ ಛಾಯೆ ಮೂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದ್ಯುತ್, ಕೃಷಿ ಕಾರ್ಯದರ್ಶಿ, ನೀರಾವರಿ ಸಚಿವ ಮತ್ತು ಹವಾಮಾನ ಇಲಾಖೆಯ ತುರ್ತು ಸಭೆಯನ್ನು ಶ್ರಮ ಶಕ್ತಿ ಭವನದಲ್ಲಿ ಬುಧವಾರ ಕರೆದಿತ್ತು.

ದೇಶದ ಬಹುತೇಕ ರಾಜ್ಯಗಳಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಾಸರಿಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಸಾಲದೆಂಬಂತೆ ದಕ್ಷಿಣ ಮತ್ತು ಈಶಾನ್ಯದ ರಾಜ್ಯಗಳು ವಿದ್ಯುತ್ ಕೊರತೆಯನ್ನು ಎದುರಿಸುತ್ತಿವೆ. ಅನೇಕ ಅಣೆಕಟ್ಟೆಗಳು ಕೂಡ ಖಾಲಿಯಾಗಿದ್ದು ಅನೇಕ ರಾಜ್ಯಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಲಿದೆ.

ಸರಾಸರಿ ಮಳೆಯ ಶೇ. 50ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆಯಿರುವುದರಿಂದ ಉಂಟಾಗುವ ವಿಪತ್ತು ನಿರ್ವಹಣೆಗಾಗಿ ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ. ಮಳೆಯ ಕೊರತೆಗೆ ಎಲ್ ನಿನೋ ಪರಿಣಾಮವೇ ಕಾರಣ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ವರ್ಷ ಎಲ್ ನಿನೋ ಪರಿಣಾಮ ಸಂಭವಿಸುವ ಸಾಧ್ಯತೆ ಶೇ.50ಕ್ಕಿಂತ ಜಾಸ್ತಿಯಾಗಿದೆ. ಇದರ ಪರಿಣಾಮದಿಂದಲೇ ಮಳೆಗಾಲ ತಡವಾಗಿ ಆರಂಭವಾಗಿದೆ.

ಉತ್ತರದ ರಾಜ್ಯಗಳಲ್ಲಿ ಮಳೆಗಾಲ ಇನ್ನೂ ತಡವಾದರೆ ಕೃಷಿಯ ಮೇಲೆ ವಿಪರೀತ ಪರಿಣಾಮವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಖಾರಿಫ್ ಬೆಳೆ ಮಳೆಗಾಲವನ್ನೇ ಅವಲಂಬಿಸಿರುವುದರಿಂದ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಕೊರತೆ ಕಾಣಲಿದೆ.

ದೇವರ ಮೇಲೆ ಭಾರ ಹಾಕಿದ ಯಡಿಯೂರಪ್ಪ : ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ 77 ಲಕ್ಷ ಎಕರೆ ಸಾಗುವಳಿ ಜಮೀನಿನಲ್ಲಿ ಕೇವಲ ಶೇ.20ರಷ್ಟು ಮಾತ್ರ ಬಿತ್ತನೆಯಾಗಿದೆ. ಈ ಬೆಳೆ ಮುಂಗಾರು ಮಳೆಗಾಲವನ್ನೇ ಅವಲಂಬಿಸುರುವುದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ.

ರಾಜ್ಯದ ಅಣೆಕಟ್ಟೆಗಳು ಕೂಡ ಭರ್ತಿಯಾಗದೆ ಚಿಂತಾಜನಕ ಸ್ಥಿತಿಗೆ ಕನ್ನಡಿ ಹಿಡಿದಿವೆ. ಕನ್ನಂಬಾಡಿ ಕಟ್ಟೆ ಖಾಲಿ ಖಾಲಿಯಾಗಿರುವುದರಿಂದ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳು ಕುಡಿಯುವ ನೀರಿನ ಕೊರತೆ ಎದುರಿಸುವ ಸಂಭವ ಜಾಸ್ತಿ. ಕಳೆದ ಆರು ವರ್ಷಗಳಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆ ಈ ಪರಿಯ ನೀರಿನ ಕೊರತೆ ಎದುರಿಸಿರಲಿಲ್ಲ. ನೀರಿನ ಪ್ರಮಾಣ ಇನ್ನೂ ಕಡಿಮೆಯಾದರೆ ಜಲಾಶಯದಿಂದ ನೀರನ್ನೂ ಬಿಡಲಾಗುವುದಿಲ್ಲ ಎಂದು ಕೆಆರ್ಎಸ್ ಇಂಜಿನಿಯರುಗಳು ಎಚ್ಚರಿಸಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ, ಬೆಂಗಳೂರಿಗರು ಕಬಿನಿ ಜಲಾಶಯದಲ್ಲಿ ಬಾಯಿ ಬಿಡಬೇಕಾಗುತ್ತದೆ.

ರಾಜ್ಯದಲ್ಲಿ ವರುಣ ದೇವ ಮುನಿಸಿಕೊಂಡು ಕುಳಿತಿದ್ದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೇವರ ಮೇಲೆಯೇ ಭಾರ ಹಾಕಿ ಕುಳಿತಿದ್ದಾರೆ. ತಾವು (ತಮ್ಮ ಪಕ್ಷ) ಯಾವುದೇ ಕೆಟ್ಟ ಕೆಲಸ ಮಾಡಿರದಿದ್ದರಿಂದ ದೇವರು ಕೂಡ ಕೈಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಬೀಜ ಮತ್ತು ಗೊಬ್ಬರದ ಪೂರೈಕೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಗತ್ಯ ಹಣವನ್ನು ಡೆಪಾಸಿಟ್ ಮಾಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಳೆಯೇ ಬಾರದಿದ್ದರೆ ಬೀಜ ಮತ್ತು ಗೊಬ್ಬರ ತೆಗೆದುಕೊಂಡು ರೈತರು ಮೈಮೇಲೆ ಸುರಿದುಕೊಳ್ಳಬೇಕು, ಸಾಲ ಪಡೆದು ಮರುತಿರುಗಿಸಲಾಗದೆ ನೇಣಿಗೆ ಶರಣಾಗಬೇಕಷ್ಟೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+