ಗುರುತಿನ ಚೀಟಿ ಯೋಜನೆ ನಿಲೇಕಣಿ ನೇತೃತ್ವ ?

ದೇಶದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡುವ ಕೇಂದ್ರ ಸರಕಾರದ ಯೋಜನೆಗೆ ಪ್ರಧಾನಮಂತ್ರಿ ಅವರು ನಂದನ್ ನಿಲೇಕಣಿ ಅವರನ್ನು ನೇಮಿಸಿ ಅವರಿಗೆ ಸಂಪುಟ ಸ್ಥಾನಮಾನ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಂತರ ಬಜೆಟ್ ನಲ್ಲಿ ಯುಪಿಎ ಈ ಯೋಜನೆ ಪ್ರಕಟಿಸಿ ಆರಂಭಿಕ 100 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿತ್ತು. ನಂತರ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಈ ಯೋಜನೆ ಸೇರಿಸಿಕೊಂಡಿತ್ತು.
ಸರಕಾರ ರಚನೆ ಸಂದರ್ಭದಲ್ಲೇ ನಿಲೇಕಣಿ ಅವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿಸಲು ಪ್ರಧಾನಿ ಸಿಂಗ್ ಒಲವು ತೋರಿಸಿದ್ದರು. ಆದರೆ, ಆದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ನಿರ್ಧಾರಕ್ಕೆ ಅವರು ಬಂದಿದ್ದು, ಶೀಘ್ರದಲ್ಲಿ ಈ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಾಗಲೇ ನಿಲೇಕಣಿ ಹಾಗೂ ಪ್ರಧಾನಿ ಸಿಂಗ್ ನಡುವೆ ಮಾತುಕತೆ ನಡೆದಿದ್ದು, ಜವಾಬ್ದಾರಿ ವಹಿಸಿಕೊಳ್ಳಲು ನಿಲೇಕಣಿ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)












Click it and Unblock the Notifications